ರಷ್ಯಾ, ಉಕ್ರೇನ್ಗೆ ದಾಳಿಯಿಂದಾದ ನಷ್ಟ ಎಷ್ಟು?

ಶುಕ್ರವಾರ, 4 ಮಾರ್ಚ್ 2022 (08:37 IST)
ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ ಹಾನಿ ಸಂಭವಿಸಿದೆ.
 
ಚೆರ್ನಿಹೀವ್ನಲ್ಲಿ ತೈಲಗಾರಗಳನ್ನು ಸ್ಫೋಟಿಸಲಾಗಿದೆ. ಖಾರ್ಕೀವ್ ನಗರದ ಮೇಲೆ ಈಗಲೂ ದಾಳಿ ಮುಂದುವರೆದಿದ್ದು, ಇಡೀ ನಗರ ಸ್ಮಶಾನ ಸದೃಶವಾಗಿದೆ.

ಕೆಲವೆಡೆ ರಷ್ಯಾ ಪಡೆಗಳು, ನಾಗರಿಕರನ್ನು ನೇರವಾಗಿ ಗುಂಡಿಟ್ಟು ಕೊಲ್ಲುತ್ತಿವೆ. ಜನಭಯಭೀತರಾಗಿದ್ದಾರೆ. ಒಬ್ಲಾಸ್ಟ್, ಬಲಾಕ್ಲಿಯಾ, ಲವಿವ್, ಮೈಕೋಲಿವ್ ನಗರಗಳ ಮೇಲೆಯೂ ದಾಳಿಗಳು ಆರಂಭವಾಗಿವೆ. ಕೀವ್ ತೊರೆಯುತ್ತಿರುವ ಪೌರರಿಗೆ ರಷ್ಯಾ ಸೇನೆ ಅಡ್ಡಿಪಡಿಸುತ್ತಿಲ್ಲ ಎನ್ನಲಾಗಿದೆ. ಈವರೆಗೂ 10ಲಕ್ಷಕ್ಕೂ ಹೆಚ್ಚು ಮಂದಿ ಉಟ್ಟಬಟ್ಟೆಯಲ್ಲಿ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ರಷ್ಯಾ ಸೇನೆಗೆ ಪ್ರತಿಯಾಗಿ ಉಕ್ರೇನ್ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ರಷ್ಯಾದ ಸುಖೋಯ್ ಎಸ್-30 ಯುದ್ಧ ವಿಮಾನವನ್ನು ಉಕ್ರೇನ್ ಹೊಡೆದುರುಳಿಸಿದೆ. ಜಪೋರಿಷಿಯಾ ಅಣು ಸ್ಥಾವರಕ್ಕೆ ನುಗ್ಗದಂತೆ ರಷ್ಯಾ ಸೇನೆಯನ್ನು ಜನರೇ ತಡೆದಿದ್ದಾರೆ. ಟೈರ್, ಲಾರಿ ಅಡ್ಡ ನಿಲ್ಲಿಸಿ ಹೋರಾಟ ಮಾಡ್ತಿದ್ದಾರೆ.

ಉಕ್ರೇನ್ ನಷ್ಟ ಎಷ್ಟು?

2870 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದ್ದರೆ 2 ಸಾವಿರಕ್ಕೂ ಹೆಚ್ಚು ಪೌರರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.

ರಷ್ಯಾ ನಷ್ಟ ಎಷ್ಟು?

ಉಕ್ರೇನ್ ಪ್ರಕಾರ 9000 ಯೋಧರು ಸಾವನ್ನಪ್ಪಿದ್ದರೆ. 30 ಯುದ್ಧ ವಿಮಾನ, 42 ಎಂಎಲ್ಆರ್ಎಸ್ ಕ್ಷಿಪಣಿ, 31 ಹೆಲಿಕಾಪ್ಟರ್, 217 ಯುದ್ಧ ಟ್ಯಾಂಕ್ ಧ್ವಂಸವಾಗಿದೆ. ರಷ್ಯಾ ತನ್ನ ಕಡೆ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ