ಉತ್ತರ ಕೊರಿಯಾದಿಂದ ಹೈಡ್ರೋಜನ್ ಬಾಂಬ್ ಪರೀಕ್ಷೆ

ಭಾನುವಾರ, 3 ಸೆಪ್ಟಂಬರ್ 2017 (17:22 IST)
ಉತ್ತರ ಕೊರಿಯಾ ಮತ್ತೆ ಉದ್ಧಟತನ ಮೆರೆದು ಇಂದು ಯಶಸ್ವಿಯಾಗಿ ಹೈಡ್ರೋಜನ್ ಬಾಂಬ್ ಪರೀಕ್ಷೆ ಮಾಡಿದೆ.
ವಿಶ್ವದ ಎಲ್ಲಾ ರಾಷ್ಟ್ರಗಳ ವಿರೋಧದ ಮಧ್ಯೆಯೂ ಕ್ಷಿಪಣಿ ಬಳಸಿ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆ ಮಾಡಿದ ಉತ್ತರ ಕೊರಿಯಾ, ಪರೀಕ್ಷೆ ಯಶಸ್ವಿಯಾಗಿದೆ. ಹಿಂದಿನ ಹೈಡ್ರೋಜನ್ ಬಾಂಬ್‌ಗಿಂತಲೂ 4-5 ಬಾರಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕೊರಿಯಾ ಪ್ರಕಟಿಸಿದೆ.
 
ಅಮೆರಿಕ,ಜಪಾನ್ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದಿರುವ ಉತ್ತರ ಕೊರಿಯಾ, 6ನೇ ಬಾರಿಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿ ತಾನು ಸಮರಕ್ಕೆ ಸಿದ್ದವಾಗಿದ್ದೇನೆ ಎನ್ನುವ ಸಂದೇಶ ಸಾರುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಅಮೆರಿಕದ ಪ್ರತಿಯೊಂದು ನಗರದ ಮೇಲೆ ದಾಳಿ ಮಾಡುವ ಶಕ್ತಿ, ಸಾಮರ್ಥ್ಯ ನಮಗಿದೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಗುಡುಗಿದ್ದಾನೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ