ಭಾರತದ ಜತೆಗೆ ಗಡಿಯಲ್ಲಿ ಅಡ್ಜಸ್ಟ್ ಮಾಡಿಕೊಳ್ತೀವಿ ಎಂದ ಚೀನಾ

ಶುಕ್ರವಾರ, 1 ಸೆಪ್ಟಂಬರ್ 2017 (08:35 IST)
ಬೀಜಿಂಗ್: ಡೋಕ್ಲಾಂ ಬಿಕ್ಕಟ್ಟು ಮುಗಿದ ಬೆನ್ನಲ್ಲೇ ಗಡಿ ಕಾಯುವ ವಿಚಾರದಲ್ಲಿ ಭಾರತೀಯ  ಸೇನೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಚೀನಾ ರಕ್ಷಣಾ ಸಚಿವಾಲಯ ಹೇಳಿದೆ.

 
‘ಗಡಿಯಲ್ಲಿ ಎಂದಿನಂತೆ ನಮ್ಮ ಸೈನಿಕರು ಗಡಿ ಕಾಯುವ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅದರ ಜತೆಗೆ ಭಾರತೀಯ ಸೇನೆ ಜತೆಗೆ ಹೊಂದಾಣಿಕೆಯಿಂದ ಇರುತ್ತೇವೆ’ ಎಂದು ಚೀನಾ ರಕ್ಷಣಾ ಮೂಲಗಳು ಹೇಳಿವೆ.

ತನ್ನ ಗಡಿ ಕಾಯುವ ಉದ್ದೇಶದಿಂದಷ್ಟೇ ಅಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಕಳೆದ ತಿಂಗಳು ಡೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಿಸಲು ಹೊರಟಾಗ ಭಾರತ ತಗಾದೆ ತೆಗೆದಿತ್ತು. ಈ ವಿಚಾರದಲ್ಲಿ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಇದೀಗ ಭಾರತದ ಪ್ರಧಾನಿ ಬ್ರಿಕ್ಸ್ ಶೃಂಗಕ್ಕೆ ಚೀನಾ ಪ್ರವಾಸ ಕೈಗೊಳ್ಳುವ ಮೊದಲು ಬಿಕ್ಕಟ್ಟು ಶಾಂತಿಯುತವಾಗಿ ಬಗೆ ಹರಿದಿದೆ.

ಇದನ್ನೂ ಓದಿ.. ದನದ ಹಾಲು v/s ಎಮ್ಮೆ ಹಾಲು: ಯಾವುದು ಉತ್ತಮ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ