ದುಬೈನಲ್ಲಿ ಈ ರೀತಿ ಮಾಡಿದರೆ ದಂಡವನ್ನು ತೆರಬೇಕಾದೀತು. ಎಚ್ಚರದಿಂದಿರಿ!

ಮಂಗಳವಾರ, 10 ಜುಲೈ 2018 (09:19 IST)
ದುಬೈ : ದುಬೈ ಮುನ್ಸಿಪಾಲಿಟಿ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡಿ ಜನರಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರವನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಿದೆ.


ಈ ವಿಚಾರವನ್ನು  ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ ದುಬೈ ಮುನ್ಸಿಪಾಲಿಟಿ ಅಧಿಕಾರಿಗಳು 2003ರ ಸ್ಥಳೀಯ ಆದೇಶ ಸಂಖ್ಯೆ 11ರಲ್ಲಿ ನೀಡಲಾಗಿರುವ ನಿಬಂಧನೆಗಳ ಪ್ರಕಾರ, ನೀವು ಒಂದು ಕಪ್ ಚಹಾ ಎಸೆದರೆ 500 ದಿರ್ಹಮ್ ದಂಡ ತೆರಬೇಕಾಗುತ್ತದೆ. ನಿಮ್ಮ ನಗರನ್ನು ಸ್ವಚ್ಛವಾಗಿಡುವುದು ನಿಮ್ಮ ಕೈಯಲ್ಲಿದೆ. ಜನರಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರವನ್ನು ಒದಗಿಸುವ ದುಬೈ ಮುನ್ಸಿಪಾಲಿಟಿಯ ಉದ್ದೇಶದ ಭಾಗವಾಗಿ ಈ ಭಾರೀ ದಂಡವನ್ನು ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.


ಹಾಗೇ ದುಬೈಯ ಮೆಟ್ರೊ ಅಥವಾ ಅವುಗಳ ನಿಲ್ದಾಣಗಳಲ್ಲಿ ಮತ್ತು ದುಬೈಯ ಬಸ್‌ಗಳಲ್ಲಿ ಚುಯಿಂಗ್ ಗಮ್ ಜಗಿಯಲು ಅವಕಾಶವಿಲ್ಲ. ಈ ರೀತಿ ಮಾಡುವುದು ಕಂಡುಬಂದರೆ ದಂಡ ತೆರಬೇಕಾಗಬಹುದು. ಚುಯಿಂಗ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ 1,000 ದಿರ್ಹಮ್ ದಂಡವನ್ನು ತೆರಬೇಕಾದೀತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ರಸ್ತೆಗಳಲ್ಲಿ ಕಸ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಮತ್ತು ಉಗುಳುವುದರ ಮೇಲೂ ದಂಡ ವಿಧಿಸಿರುವುದಾಗಿ ದುಬೈ ಮುನ್ಸಿಪಾಲಿಟಿ ಟ್ವೀಟರ್ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ