Thailand vs Cambodia war:ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್: ಡೊನಾಲ್ಡ್ ಟ್ರಂಪ್ ಬೆದರಿಕೆ

Sampriya

ಭಾನುವಾರ, 27 ಜುಲೈ 2025 (10:04 IST)
ವಾಷಿಂಗ್ಟನ್‌: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿ ಸಂಘರ್ಷವನ್ನು ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಹೋಲಿಕೆ ಮಾಡಿದ್ದಾರೆ. 

ಸ್ಕಾಟ್ಲೆಂಡ್‌ಗೆ ಭೇಟಿ ನೀಡುತ್ತಿರುವ ಟ್ರಂಪ್ ಅವರು, ಈ ನಡುವೆ ಸಾಮಾಜಿಕ ಜಾಲತಾಣ ಟ್ರೂತ್‌ನಲ್ಲಿ ಪೋಸ್ಟ್‌ ಮಾಡಿ,  ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿ ಸಂಘರ್ಷ ಕುರಿತು ಉಲ್ಲೇಖಿಸಿ, ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ ಎಂದಿದ್ದಾರೆ.

ಭಾರತ-ಪಾಕ್ ಸಂಘರ್ಷವನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು. ಈ ಬೆದರಿಕೆಯಿಂದ ಎರಡೂ ದೇಶಗಳು ಶಾಂತಿ ಮಾತುಕತೆಗೆ ಒಲವು ತೋರುವ ಸಾಧ್ಯತೆಯಿದೆ. ಮುಂದಿನ ಬೆಳವಣಿಗೆಗಳಿಗಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಉಭಯ ರಾಷ್ಟ್ರಗಳು ಯುದ್ಧ ನಿಲ್ಲಿಸದಿದ್ದರೆ, ಎರಡೂ ರಾಷ್ಟ್ರಗಳೊಂದಿಗಿನ ಯಾವುದೇ ವ್ಯಾಪಾರ ಒಪ್ಪಂದಗಳ ಮಾಡಿಕೊಳ್ಳುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

ಕಾಂಬೋಡಿಯಾ ಮತ್ತು ಥೈಲ್ಯಾಂಡ್ ರಾಷ್ಟ್ರಗಳ ನಾಯಕರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದು, ತಕ್ಷಣವೇ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಆಗ್ರಹಿಸಲಾಗಿದೆ. ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ತೀವ್ರ ಸೇನಾ ಸಂಘರ್ಷ ಆರಂಭವಾಗಿದ್ದು, ಕಾಂಬೋಡಿಯಾ ಮೇಲೆ ಥಾಯ್ಲೆಂಡ್ ವಾಯುದಾಳಿ ನಡೆಸುತ್ತಿದೆ.

ಥೈಲ್ಯಾಂಡ್ ಜೊತೆಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಕಾಂಬೋಡಿಯಾದ ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ. ನಮ್ಮ ನಡುವಿನ ಮಾತುಕತೆ ಉತ್ತಮವಾಗಿತ್ತು. ಕಾಂಬೋಡಿಯಾದಂತೆಯೇ ಥೈಲ್ಯಾಂಡ್ ಕೂಡ ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತದೆ ಎಂಬು ಭಾವಿಸುತ್ತೇನೆ. ಮಾತುಕತೆ ನಡೆಸಲಾಗಿದ್ದು, ಕದನ ವಿರಾಮ, ಶಾಂತಿ ಸ್ಥಾಪನೆಯನ್ನು ಶೀಘ್ರದಲ್ಲೇ ನೋಡುವ ವಿಶ್ವಾಸವಿದೆ ಎಂದಿದ್ದಾರೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ