ಗೂಗಲ್ ನಲ್ಲಿ ಈಡಿಯಟ್ ಎಂದು ಸರ್ಚ್ ಮಾಡಿ ಟ್ರಂಪ್ ಫೋಟೊ ಕಾಣಿಸುತ್ತೆ ನೋಡಿ!
ಶನಿವಾರ, 21 ಜುಲೈ 2018 (07:18 IST)
ಅಮೆರಿಕಾ: ಈ ಹಿಂದೆ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ಗೂಗಲ್ ನಲ್ಲಿ "ಫೆಕು " ಪದ ಬಳಸಿ ಸರ್ಚ್ ಮಾಡಿದರೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ತೋರಿಸುತ್ತಿತ್ತು. ಆದರೆ ಇದೀಗ 'ಈಡಿಯಟ್' ಎಂದು ಹುಡುಕಿದರೆ ಗೂಗಲ್ ನಲ್ಲಿ ಅಮೇರಿಕಾದ ಗಣ್ಯ ವ್ಯಕ್ತಿಯೊಬ್ಬರ ಚಿತ್ರ ಬರುತ್ತಿದೆಯಂತೆ.
ಹೌದು. ಗೂಗಲ್ ನಲ್ಲಿ 'idiot' ಎಂದು ಸರ್ಚ್ ಬಟನ್ ಒತ್ತಿದರೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಚಿತ್ರಗಳು ಸಿಗುತ್ತಿವೆ. ಈ ಕುರಿತು ಸಿಎನ್‌ಇಟಿ ಗುರುವಾರ ವರದಿ ನೀಡಿದ್ದು, ಇತ್ತೀಚೆಗೆ ಆನ್ ಲೈನ್ ಕಾರ್ಯಕರ್ತರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ರಾಜಕೀಯ ನೀತಿಯನ್ನು ವಿರೋಧಿಸಿ ಅಭಿಯಾನ ನಡೆಸಿ 'ಈಡಿಯಟ್' ಪದದೊಂದಿಗೆ ಟ್ರಂಪ್ ಫೋಟೋಗೆ ವೋಟ್ ಮಾಡಿದ ಕಾರಣ 'ಈಡಿಯಟ್' ಎನ್ನುವ ಪದಕ್ಕೆ ಟ್ರಂಪ್ ಚಿತ್ರಗಳು ಕಾಣಿಸುತ್ತಿವೆ ಎಂದು ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ