ಅಮೇರಿಕಾದಲ್ಲಿ ಈ ಕಾರಣಕ್ಕೆ ಶ್ವಾನಕ್ಕೆ ಪ್ರಶಸ್ತಿ ನೀಡಿ ಸನ್ಮಾನ

ಭಾನುವಾರ, 1 ಸೆಪ್ಟಂಬರ್ 2019 (06:58 IST)
ಅಮೇರಿಕಾ : ಅಮೇರಿಕಾದಲ್ಲಿ ಹರ್ರಿಕೇನ್ ಎನ್ನುವ ಅಮೆರಿಕಾದ ರಹಸ್ಯ ಸೇವಾ‌ ತಂಡದ ಶ್ವಾನಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2014ರಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆಲ ಆಗಂತುಕರು ಶ್ವೇತಭವನದ ಮೇಲೆ ದಾಳಿ ನಡೆಸಲು ಮುಂದಾಗಿದ್ದರು‌. ಈ ವೇಳೆ ಈ ಶ್ವಾನ ಅವರನ್ನು ತಡೆದು ಬರಾಕ್ ಒಬಾಮ ಅವರ ಜೀವ ಉಳಿಸಿತ್ತು. ಆ ವೇಳೆ ಹರ್ರಿಕೇನ್ ಗೆ ಕೆಲವು ಗಂಭೀರ ಗಾಯವಾಗಿದ್ದವು


ಈ ಹಿನ್ನಲೆಯಲ್ಲಿ ಇದೀಗ ಈ ಶ್ವಾನಕ್ಕೆ ಬ್ರಿಟಿಷ್ ವೆಟೆರೀಯನ್ ಸಂಘ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಶ್ವಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್ ಮಿರಾಚಿ, ಹುರ್ರಿಕೇನ್ ಅದ್ಭುತ ಶ್ವಾನ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ