ಕುಟುಂಬವೊಂದು ಖರೀದಿಸಿದ ಸೊಪ್ಪಿನ ಸಲಾಡ್ ಪ್ಯಾಕ್ ನಲ್ಲಿ ಇದ್ದದ್ದೇನು ಗೊತ್ತಾ?

ಗುರುವಾರ, 22 ಆಗಸ್ಟ್ 2019 (09:06 IST)
ವಿಸ್ಕಾನ್ಸಿನ್ : ಅಮೇರಿಕಾದ ವಿಸ್ಕಾನ್ಸಿನ್ ನಲ್ಲಿ ಕುಟುಂಬವೊಂದು ಖರೀದಿಸಿದ ಸೊಪ್ಪಿನ ಸಲಾಡ್ ಪ್ಯಾಕ್ ನಲ್ಲಿ ಜೀವಂತ ಕಪ್ಪೆಯೊಂದು ಇರುವುದು ಕಂಡುಬಂದಿದೆ.
ಗ್ಲೆನ್‌ಡೇಲ್‌ ಪ್ರದೇಶದ ಪಿಕ್ ಎನ್ ಸೇವ್ ಗ್ರಾಸರಿ ಸ್ಟೋರ್‌ನಲ್ಲಿ ಅಲೆನ್ ಕುಟುಂಬವು  ಸೊಪ್ಪಿನ ಸಲಾಡ್ ಪ್ಯಾಕ್ ನ್ನು ಖರೀದಿಸಿತ್ತು. ಮನೆಗೆ ಹೋಗಿ ಅದನ್ನು ತೆರೆದು ನೋಡಿದಾಗ ಅದರಲ್ಲಿ ಜೀವಂತ ಕಪ್ಪೆಯೊಂದಿರುವುದು  ಕಂಡುಬಂದಿದೆ.


ಕಾರ್ಲಿ ಅಲೆನ್ ಎನ್ನುವವರು ಈ ದೃಶ್ಯವನ್ನು ವಿಡಿಯೋ ಮಾಡಿಕೊಂಡು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಈ ವಿಡಿಯೋವನ್ನು ದಿನಸಿ ಅಂಗಡಿಯವರಿಗೆ ತೋರಿಸಿದ್ದು, ಅವರು ಕ್ಷಮೆಯಾಚಿಸಿ ಹಣವನ್ನು ವಾಪಾಸು ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ