ಸಂತಸದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿಗಳಿಗೆ ಆಮೇಲೆ ಆಗಿದ್ದೇನು ಗೊತ್ತಾ?

ಸೋಮವಾರ, 26 ಆಗಸ್ಟ್ 2019 (12:20 IST)
ಅಮೇರಿಕಾ : ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವೇ ಕ್ಷಣದಲ್ಲಿ ದಂಪತಿಗಳಿಬ್ಬರು ಸಾವನಪ್ಪಿದ ಹೃದಯವಿದ್ರಾವಕ ಘಟನೆ ಟೆಕ್ಸಾಸ್ ನ ಆರೆಂಜ್ ಕೌಂಟಿನಲ್ಲಿ ನಡೆದಿದೆ.ಹ್ಯಾರ್ಲೆ ಮತ್ತು ರಿನೋನ್ ಮೊರ್ಗನ್ ಜೋಡಿ ಕೋರ್ಟ್ ರೂಂನಲ್ಲಿ ಹಾರ ಬದಲಿಸಿಕೊಂಡು ವಿವಾಹ ನೋಂದಣಿ ಪ್ರಮಾಣಪತ್ರ ಪಡೆದು ನವವಿವಾಹಿತರಿಬ್ಬರು ರಿಸೆಪ್ಸನ್ ನಡೆಯುವ ಸ್ಥಳಕ್ಕೆ ಕಾರಲ್ಲಿ ಹೋಗುತ್ತಿದ್ದಾಗ ಯಮರೂಪದಲ್ಲಿ ಬಂದ ಟ್ರಕ್ ಅವರಿಬ್ಬರ ಮೇಲೆ ಹರಿದು ಸ್ಥಳದಲ್ಲೇ ಸಾವನಪ್ಪಿದ್ದಾರೆ.

 

ಸುಖವಾಗಿ ಸಂಸಾರ ಮಾಡಬೇಕಾಗಿದ್ದ ಮಕ್ಕಳು ರಕ್ತದ ಮಡಲಿನಲ್ಲಿ ಬಿದ್ದು ನರಳಿ ಸಾವನಪ್ಪಿದ್ದನ್ನು ಕಂಡ ಅವರ ಹೆತ್ತವರು ಗೋಳಾಡುತ್ತಿದ್ದು, ಈ ಭೀಕರ ಸಾವಿಗೆ ಇಡೀ ಅಮೆರಿಕಾವೇ ಕಂಬನಿ ಮಿಡಿಯುತ್ತಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ