ಮಾತುಕತೆ ಬಳಿಕ ಹಿಂದೆ ಸರಿದ ಭಾರತ-ಚೀನಾ ಸೇನೆ

ಬುಧವಾರ, 10 ಜೂನ್ 2020 (10:26 IST)
ನವದೆಹಲಿ: ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಸರಿಪಡಿಸಲು ಭಾರತ ಮತ್ತು ಚೀನಾ ಸೇನಾ ಅಧಿಕಾರಿಗಳ ಮಟ್ಟದ ಸಭೆ ನಡೆದ ಬಳಿಕ ಉಭಯ ದೇಶಗಳ ಸೇನೆ 1 ರಿಂದ 2 ಕಿ. ಮೀ.ಗಳಷ್ಟು ಹಿಂದೆ ಸರಿದಿವೆ.


ಆದರೆ ಪ್ಯಾಂಗಾಂಗ್ ನಲ್ಲಿ ಸೇನೆ ಯಥಾ ಸ್ಥಿತಿಯಲ್ಲಿ ಜಮಾವಣೆಗೊಂಡಿದೆ. ಉಳಿದಂತೆ ನಾಲ್ಕು ವಿವಾದಿತ ಪ್ರದೇಶಗಳ ಪೈಕಿ ಮೂರರಿಂದ ಸೇನೆ ಹಿಂದಕ್ಕೆ ಸರಿಸಲಾಗಿದೆ. ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಲಡಾಖ್ ನಲ್ಲಿ ತಮ್ಮ ಶಸ್ತ್ರಾಸ್ತ್ರಗಳ ಸಮೇತ ಎರಡೂ ದೇಶಗಳ ಸೇನೆಗಳು ಸುಮಾರು 1 ರಿಂದ 2 ಕಿ.ಮೀಗಳಷ್ಟು ಹಿಂದಕ್ಕೆ ಸರಿದಿವೆ.  ಆದರೆ ಇದಕ್ಕೂ ಮೊದಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸುಮಾರು 3 ಕಿ. ಮೀ.ಗಳಷ್ಟು ಮುಂದಡಿಯಿಟ್ಟಿತ್ತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ