ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Krishnaveni K

ಶುಕ್ರವಾರ, 16 ಮೇ 2025 (12:21 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಪಾಕಿಸ್ತಾನ ಬೆಂಬಲಿಸಿದ ಟರ್ಕಿ ಮತ್ತು ಚೀನಾಗೆ ಈಗ ಭಾರತ ಸರಿಯಾಗಿ ಪಾಠ ಕಲಿಸುತ್ತಿದೆ.

ಟರ್ಕಿ ದೇಶಕ್ಕೆ ಈ ಹಿಂದೆ ಪ್ರಾಕೃತಿಕ ವಿಕೋಪವುಂಟಾದಾಗ ಭಾರತವೇ ಮೊದಲು ಆ ದೇಶಕ್ಕೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿ ಸಹಾಯ ಮಾಡಿತ್ತು. ಆದರೆ ಅದನ್ನು ಮರೆತು ಟರ್ಕಿ ಈಗ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿದೆ. ಇದು ಭಾರತವನ್ನು ಕೆರಳಿಸಿದೆ.

ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ಕದನದ ವೇಳೆ ಟರ್ಕಿ ಡ್ರೋಣ್, ಯುದ್ಧ ಸಾಮಗ್ರಿಗಳನ್ನು ಕಳುಹಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಚೀನಾ ಕೂಡಾ ಇದೇ ಕೆಲಸ ಮಾಡಿತ್ತು. ಹೀಗಾಗಿ ಈಗ ಈ ಎರಡೂ ರಾಷ್ಟ್ರಗಳ ಸೊಕ್ಕು ಮುರಿಯಲು ಭಾರತ ಮುಂದಾಗಿದೆ.

ಅದರ ಭಾಗವಾಗಿ ಟರ್ಕಿಯ ಸೆಲೆಬಿ ಏವಿಯೇಷನ್ ಏರ್ ಪೋರ್ಟ್ ಸೇವೆಗಳನ್ನು ಗುರುವಾರದಿಂದಲೇ ಸ್ಥಗಿತಗೊಳಿಸಲಾಗಿದೆ. ಚೀನಾದ ಪ್ರಮುಖ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಟ್ವೀಟ್ ಖಾತೆಯನ್ನು ಬ್ಲಾಕ್ ಮಾಡಿದೆ. ಚೀನಾ ಜೊತೆಗಿನ ಶೈಕ್ಷಣಿಕ ಒಪ್ಪಂದಗಳನ್ನೂ ಕಡಿದುಹಾಕಿದೆ. ಈಗಾಗಲೇ ಭಾರತದಲ್ಲಿ ಚೀನಾ ಮತ್ತು ಟರ್ಕಿ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ. ಈ ಮೂಲಕ ನಮಗೆ ದ್ರೋಹ ಬಗೆದ ಎರಡು ರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ