ಪಾಕ್ ಮೇಲೆ ಎಲ್ಲಿ ಯುದ್ಧ ಮಾಡಿದ್ರು ಎಂದ ಕೈ ಶಾಸಕ: ನೀವೇ ನಿಜವಾದ ದುಷ್ಮನ್ ಗಳು ಎಂದ ನೆಟ್ಟಿಗರು
ಕಾಂಗ್ರೆಸ್ ಶಾಸಕ ಮಂಜುನಾಥ್ ಕೂಡಾ ಇಂತಹದ್ದೇ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತೀಯ ಸೇನೆಗೇ ಅವಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ನಿಜವಾದ ದುಷ್ಮನ್ ಗಳು ನಿಮ್ಮಂಥವರೇ ಎಂದಿದ್ದಾರೆ. ನಿಮಗೆಲ್ಲಾ ಮತಿಭ್ರಮಣೆ ಆಗಿದೆಯಾ? ನಮ್ಮ ಸೈನಿಕರ ಶಕ್ತಿಯನ್ನೇ ಅನುಮಾನಿಸುವ ನಿಮಗೆಲ್ಲಾ ಏನು ಹೇಳಬೇಕು ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.