ಕಪಟಿ ಚೀನಾಗೆ ಭಾರತದ ಖಡಕ್ ಉತ್ತರ

ಭಾನುವಾರ, 16 ಜುಲೈ 2017 (07:27 IST)
ನವದೆಹಲಿ: ಒಂದು ಕಡೆ ಸಿಕ್ಕಿಂ ಗಡಿಯಲ್ಲಿ ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ಪಾಕ್ –ಭಾರತ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿಕೆ ನೀಡಿರುವುದಕ್ಕೆ ಭಾರತ ಸರಿಯಾಗಿಯೇ ತಿರುಗೇಟು ನೀಡಿದೆ.

 
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಚೀನಾಗೆ ಖಡಕ್ ಸಂದೇಶ ನೀಡಿದ್ದಾರೆ. ನಮ್ಮ ಸಮಸ್ಯೆ ಬಗೆ ಹರಿಸಲು ನಮಗೆ ಗೊತ್ತು, ನಿಮ್ಮ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ಸಿಎಂ ಕಟುವಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಗಡಿ ತಕರಾರಿಗೆ ಮಧ್ಯಸ್ಥಿಕೆ ವಹಿಸುತ್ತೇವೆಂದು ಚೀನಾ ಕಪಟ ನಾಟಕವಾಡಿತ್ತು. ಮತ್ತೊಂದೆಡೆ ಸಿಕ್ಕಿಂ ಗಡಿಯಲ್ಲಿ ಕಾಲ್ಕೆರೆದು ಜಗಳಕ್ಕೆ ಬರುವುದರೊಂದಿಗೆ ಭಾರತಕ್ಕೆ ತಾನೇ ತಲೆನೋವು ತಂದೊಡ್ಡುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ.. ಭಾರತಕ್ಕ ಗೆಲುವಿನ  ‘ಮಿಠಾಯಿ’ ಕೊಡಿಸಿ ರಾಜ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ