ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಇದೀಗ ಮಾಸ್ಕ್‌ಮ್ಯಾನ್ ಚಿನ್ನಯ್ಯ ತಂದ ಬುರುಡೆಯ ಮೂಲವನ್ನು ಹುಡುಕಲು ಎಸ್‌ಐಟಿ ತನಿಖೆ ನಡೆಸುತ್ತಿದೆ. ಬುರುಡೆ ವಿಚಾರವಾಗಿ ಇದೀಗ ಚಿನ್ನಯ್ಯ, ಜಯಂತ್ ಹಾಗೂ ಮಟ್ಟಣ್ಣವರ್ ಅವರು ಮೂವರು ಒಂದೊಂದು ಹೇಳಿಕೆಯನ್ನು ನೀಡಿದ್ದಾರೆ.
ಎಸ್‌ಐಟಿ ತನಿಖೆ ವೇಳೆ ಚಿನ್ನಯ್ಯ ಈ ಬುರುಡೆಯನ್ನು ಜಯಂತ್ ಮನೆಯಲ್ಲಿತ್ತು, ಆತನೇ ನನ್ನ ಕೈಗೆ ಕೊಟ್ಟಿದ್ದು ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಇನ್ನೂ ಜಯಂತ್ ವಿಚಾರಣೆಯಲ್ಲಿ, ಚಿನ್ನಯ್ಯನೇ ಆ ಬುರುಡೆಯನ್ನು ಚೆನ್ನೈನಿಂದ ತಂದಿರುವುದಾಗಿ ಹೇಳಿದ್ದಾರೆ. ಆತ ಚೆನ್ನೈನಿಂದ ಬಂದಿದ್ದ ವೇಳೆ ಮೂರು ದಿನ ನನ್ನ ಮನೆಯಲ್ಲಿ ಆಶ್ರಯ ನೀಡಿರುವುದಾಗಿ ಹೇಳಿದ್ದಾರೆ.
ಇನ್ನೂ ಗಿರೀಶ್ ಮಟ್ಟಣ್ಣವರ್ ಅವರು ಚಿನ್ನಯ್ಯ ತಂದ ಬುರುಡೆ ಧರ್ಮಸ್ಥಳದಲ್ಲಿ ಸಿಕ್ಕಿರುವುದಾಗಿ ಹೇಳಿದ್ದಾರೆ. ಒಟ್ಟಾರೆ ಇದೀಗ ಮೂವರ ಹೇಳಿಕೆ ತದ್ವಿರುದ್ಧವಾಗಿದ್ದು, ಈ ಬಗ್ಗೆ ಎಸ್‌ಐಟಿ ಮತ್ತಷ್ಟು ತನಿಖೆಯನ್ನು ನಡೆಸಲಿದೆ.