ಅಫ್ಘಾನಿಸ್ತಾನ ಭೀಕರ ಭೂಕಂಪ: ವಿದೇಶದಲ್ಲಿದ್ರೂ ಕರ್ತವ್ಯ ಮರೆಯದ ಪ್ರಧಾನಿ ನರೇಂದ್ರ ಮೋದಿ

Sampriya

ಸೋಮವಾರ, 1 ಸೆಪ್ಟಂಬರ್ 2025 (15:46 IST)
Photo Credit X
ಅಪ್ಘಾನಿಸ್ತಾನ: ಭೂಕಂಪದಿಂದಾಗಿ 800ಮಂದಿ ಸಾವನ್ನಪ್ಪಿ, 2,500ಮಂದಿ ಗಂಭೀರವಾಗಿ ಗಾಯಗೊಂಡು ಅಪಾರ ಆಸ್ತಿ ಹಾನಿಯಾಗಿರುವ ಅಪ್ಘಾನಿಸ್ತಾನ‌ದ ಸ್ಥಿತಿಗೆ ಹಲವು ದೇಶಗಳು ಬೇಸರ ವ್ಯಕ್ತಪಡಿಸಿದೆ. 

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾನದಲ್ಲಿ ಬರೆದುಕೊಂಡು, ಅಪ್ಘಾನಿಸ್ತಾನದ ಪರಿಸ್ಥಿತಿಗೆ ಕಂಬನಿ ಮಿಡಿದಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದಾಗಿ ಜೀವಹಾನಿಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದ ಪೂರ್ವದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 800 ಜನರು ಸಾವನ್ನಪ್ಪಿದ್ದಾರೆ, 2,500 ಜನರು ಗಾಯಗೊಂಡಿದ್ದಾರೆ ಮತ್ತು ಹಲವಾರು ಹಳ್ಳಿಗಳು ನಾಶವಾಗಿದೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. 

ಭಾನುವಾರ ತಡರಾತ್ರಿ (ಆಗಸ್ಟ್ 31, 2025) 6.0 ತೀವ್ರತೆಯ ಭೂಕಂಪವು ನೆರೆಯ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಸಮೀಪವಿರುವ ಕುನಾರ್ ಪ್ರಾಂತ್ಯದ ಪಟ್ಟಣಗಳ ಸರಣಿಯನ್ನು ಹೊಡೆದಿದೆ.

ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ ಪೋಸ್ಟ್‌ನಲ್ಲಿ ಹೀಗಿದೆ."ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಜೀವಹಾನಿಯಿಂದ ತೀವ್ರ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ, ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಭಾರತ ಸಿದ್ಧವಾಗಿದೆ" ಎಂದು X ನಲ್ಲಿ  ಮೋದಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ