ಧರ್ಮಸ್ಥಳ: ರಾಜ್ಯ ಬಿಜೆಪಿ ಇಂದು ಧರ್ಮಸ್ಥಳ ಚಲೋ ಸಮಾವೇಶ ಹಮ್ಮಿಕೊಂಡಿದೆ. ಈಗಾಗಲೇ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಬಹುತೇಕ ನಾಯಕರು ಬಂದು ಭಾಷಣ ಮಾಡುತ್ತಿದ್ದಾರೆ. ಈ ವೇಳೆ ಆರ್ ಅಶೋಕ್ ಬಿಜೆಪಿ ರಾಜ್ಯಾಧ್ಯಕ್ಷರು ಯಾರು ಎಂದು ಕನ್ ಫ್ಯೂಸ್ ಆಗಿದ್ದಾರೆ.
ಧರ್ಮಸ್ಥಳ ಚಲೋ ಸಮಾವೇಶಕ್ಕೆ ಮುನ್ನ ಇಂದು ಬಿಜೆಪಿ ನಾಯಕರು ಮಂಜುನಾಥಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಬಳಿಕ ಸಮಾವೇಶದಲ್ಲಿ ಬಿಜೆಪಿಯ ಬಹುತೇಕ ನಾಯಕರು ಭಾಗಿಯಾಗಿದ್ದಾರೆ. ಆದರೆ ಪ್ರತಿಪಕ್ಷ ನಾಯಕರಾಗಿರುವ ಆರ್ ಅಶೋಕ್ ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ. ಅಶೋಕ್ ಭಾಷಣಕ್ಕೆ ಮೈಕ್ ಮುಂದೆ ಬರುವಾಗಲೇ ಜನರು ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.
ಬಹುಶಃ ಇದರಿಂದ ಅವರು ಗಲಿಬಿಲಿಯಾಗಿದ್ದರೋ ಏನೋ. ಒಟ್ಟಿನಲ್ಲಿ ಭಾಷಣ ಆರಂಭಿಸುವಾಗ ಬಿಜೆಪಿ ರಾಜ್ಯಾದ್ಯಕ್ಷರಾದ ಪ್ರಲ್ಹಾದ್ ಜೋಶಿಯವರೇ ಎಂದು ಬಿಟ್ಟರು. ಬಳಿಕ ತಮ್ಮ ತಪ್ಪಿನ ಅರಿವಾಗಿ ವಿಜಯೇಂದ್ರ ಅವರೇ ಎಂದರು.
ಧರ್ಮಸ್ಥಳ ಚಲೋ ಸಮಾವೇಶಕ್ಕೆ ಇಂದು ಸಾಕಷ್ಟು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಆದರೆ ಕರಾವಳಿಯ ಹಿಂದೂ ಮುಖಂಡರಿಗೆ ಭಾಷಣ ಮಾಡಲು ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನವೂ ಕೇಳಿಬಂತು.