ನವದೆಹಲಿ: ಚೀನಾ ಗಡಿಯಲ್ಲಿ ತಗಾದೆ ತೆಗೆಯುವುದರಲ್ಲೇ ಬ್ಯುಸಿಯಾಗಿದ್ದರೆ, ಭಾರತ ಸದ್ದಿಲ್ಲದೆಯೇ ಆ ದೇಶವನ್ನು ಇನ್ನೊಂದು ವಲಯದಲ್ಲಿ ಮೀರಿಸಿ ಬೆಳೆಯುತ್ತಿದೆ. ಇದರೊಂದಿಗೆ ಚೀನಾ ಮಾಧ್ಯಮಗಳ ಆತಂಕ ನಿಜವಾಗಿದೆ.
ಬಂಡವಾಳ ಹೂಡಿಕೆ ವಿಚಾರದಲ್ಲಿ ವಿಶ್ವವೇ ಇದೀಗ ಭಾರತವನ್ನು ಆರಿಸಿಕೊಳ್ಳುತ್ತಿರುವುದರ ಬಗ್ಗೆ ಚೀನಾ ಮಾಧ್ಯಮಗಳು ನಿನ್ನೆಯಷ್ಟೇ ಕಳವಳ ವ್ಯಕ್ತಪಡಿಸಿದ್ದವು. ಅದೀಗ ನಿಜವಾಗಿದೆ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರ ಪಟ್ಟಿಯಲ್ಲಿ ಭಾರತ ಚೀನಾವನ್ನು ಮೀರಿಸಿ ಮುನ್ನಡೆದಿದೆ.
ವಿಶ್ವ ಬ್ಯಾಂಕ್ ಬಿಡುಗಡೆಗೊಳಿಸಿದ ಜಾಗತಿಕ ಆರ್ಥಿಕ ಭವಿಷ್ಯದ ವರದಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಇದಕ್ಕೆ ಹೋಲಿಸಿದರೆ ಚೀನಾದ ಸಾಧನೆ ತೀರಾ ಕಡಿಮೆ ಎನ್ನಲಾಗಿದೆ. ಭಾರತಕ್ಕೆ ಹೋಲಿಸಿದರೆ ಚೀನಾ ಆರ್ಥಿಕತೆ ಕುಸಿಯುತ್ತಿದ್ದು, ಶೇ. 6.5 ಕ್ಕೆ ಇಳಿದಿದೆ. ಆದರೆ ಭಾರತದ ಶೇಕಡಾವಾರು ಪ್ರಗತಿ 7.2 ರಷ್ಟಿದೆ ಎನ್ನಲಾಗಿದೆ.