Fuel Price hike: ರಾಜ್ಯ ಆಯ್ತು, ಈಗ ಕೇಂದ್ರದ ಸರದಿ, ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಳ

Krishnaveni K

ಸೋಮವಾರ, 7 ಏಪ್ರಿಲ್ 2025 (16:33 IST)
ನವದೆಹಲಿ: ರಾಜ್ಯದ ಬಳಿಕ ಈಗ ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ 2 ರೂ. ಗೆ ಹೆಚ್ಚಳ ಮಾಡಿದೆ. ಮೊನ್ನೆಯಷ್ಟೇ ಕರ್ನಾಟಕ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದರಿಂದ ಡೀಸೆಲ್ ಬೆಲೆ 2 ರೂ. ಹೆಚ್ಚಳವಾಗಿತ್ತು.

ಕರ್ನಾಟಕದಲ್ಲಿ ಬಸ್, ಮೆಟ್ರೊ, ಹಾಲು, ವಿದ್ಯುತ್ ದರ ಏರಿಕೆ ಬಳಿಕ ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿ ದರ ಏರಿಕೆಗೆ ಕಾರಣವಾಗಿದ್ದಕ್ಕೆ ಈಗಾಗಲೇ ಬಿಜೆಪಿ ಪ್ರತಿಭಟನೆ ಶುರು ಮಾಡಿದೆ. ವಿಪರ್ಯಾಸವೆಂದರೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದೆ.

ಕೇಂದ್ರದ ಹೊಸ ಆದೇಶದ ಪ್ರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಒಂದು ಲೀಟರ್ ಗೆ 11 ರೂ.ಗಳಿಂದ 13 ರೂ.ಗಳಿಗೆ ಏರಿಕೆಯಾಗಿದೆ. ಇನ್ನು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 10 ರೂ.ಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಅದರ ಪರಿಣಾಮ ಇಲ್ಲಿ ಸುಂಕ ಹೆಚ್ಚಿಸಲಾಗಿದೆ.

ಸದ್ಯದ ಮೂಲಗಳ ಪ್ರಕಾರ ರಿಟೈಲ್ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟದು. ನಾಳೆ ಪೆಟ್ರೋಲ್, ಡೀಸೆಲ್ ಮೇಲಿನ ನಿಖರ ಬೆಲೆ ತಿಳಿದುಬರಲಿದೆ. ಅಬಕಾರಿ ಸುಂಕ ಹೆಚ್ಚಿಸಿದರೂ ಪೆಟ್ರೋಲ್, ಡೀಸೆಲ್ ಮೇಲಿನ ದರ ಏರಿಕೆ ಮಾಡಲಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ