ಭಾರತದ ಜೊತೆ ನಿಂತ ಇಸ್ರೇಲ್: ಲಕ್ಷದ್ವೀಪ ಅಭಿವೃದ್ಧಿಗೆ ಸಾಥ್

Krishnaveni K

ಮಂಗಳವಾರ, 9 ಜನವರಿ 2024 (12:05 IST)
ನವದೆಹಲಿ: ಲಕ್ಷದ್ವೀಪವನ್ನು ಮತ್ತೊಂದು ಮಾಲ್ಡೀವ್ಸ್ ಆಗಿ ಮಾಡಲು ಹೊರಟಿರುವ ಭಾರತಕ್ಕೆ ಸ್ನೇಹಿತ ರಾಷ್ಟ್ರ ಇಸ್ರೇಲ್ ಸಾಥ್ ನೀಡಲು ಮುಂದೆ ಬಂದಿದೆ.

ಭಾರತ ಮತ್ತು ಮಾಲ್ಡೀವ್ಸ್ ನಡುವೆ ಸಂಬಂಧ ಹಳಸಿರುವ ಬೆನ್ನಲ್ಲೇ ಮಿತ್ರರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸಲು ಇಸ್ರೇಲ್ ಮುಂದಾಗಿದೆ. ಮುಂದಿನ ದಿನಗಳಲ್ಲಿ ಲಕ್ಷದ್ವೀಪವನ್ನು ಮಾದರಿ ಪ್ರವಾಸೀ ತಾಣವಾಗಿ ಮಾಡಲು ಹೊರಟಿರುವ ಭಾರತಕ್ಕೆ ತನ್ನ ಬೆಂಬಲ ಸೂಚಿಸಿದೆ.

ಅಷ್ಟೇ ಅಲ್ಲ, ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಬಳಕೆಗೆ ಯೋಗ್ಯವಾಗಿ ಮಾಡುವ ಯೋಜನೆಗೆ ಕಳೆದ ವರ್ಷವೇ ಇಸ್ರೇಲ್ ಪ್ಲ್ಯಾನ್ ಮಾಡಿತ್ತು. ಇದೀಗ ಆ ಯೋಜನೆಯನ್ನು ಜಾರಿಗೆ ತರಲು ಇಸ್ರೇಲ್ ಮುಂದಾಗಿದೆ.

ಇದೀಗ ಲಕ್ಷದ್ವೀಪಕ್ಕೆ ಇಸ್ರೇಲ್ ರಾಯಭಾರಿ ಕಚೇರಿ ಅಧಿಕಾರಿಗಳು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಲಕ್ಷದ್ವೀಪವನ್ನು ಆಕರ್ಷಣೀಯ ತಾಣ ಎಂದು ತನ್ನ ಎಕ್ಸ್ ಪೇಜ್ ನಲ್ಲಿ ಬರೆದುಕೊಂಡು ಪ್ರಚಾರವನ್ನೂ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ