ಲಕ್ಷದ್ವೀಪಕ್ಕೆ ಪ್ರವಾಸ ಮಾಡಲು ದಾರಿ ಯಾವುದು?

Krishnaveni K

ಸೋಮವಾರ, 8 ಜನವರಿ 2024 (11:51 IST)
ಬೆಂಗಳೂರು: ಇತ್ತೀಚೆಗೆ ಪ್ರಧಾನಿ ಮೋದಿ ಲಕ್ಷದ್ವೀಪ ಕಡಲ ಕಿನಾರೆಯಲ್ಲಿ ವಿಹರಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದಾದ ಬಳಿಕ ಎಷ್ಟೋ ಮಂದಿ ಮಾಲ್ಡೀವ್ಸ್ ಪ್ರವಾಸಕ್ಕಿಂತ ನಮ್ಮ ಲಕ್ಷದ್ವೀಪ ಪ್ರವಾಸವೇ ಬೆಸ್ಟ್ ಎಂದು ಅಂದುಕೊಂಡಿದ್ದು ನಿಜ. ಹೀಗಾಗಿಯೇ ಗೂಗಲ್ ನಲ್ಲಿ ಅನೇಕರು ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೆ ಲಕ್ಷದ್ವೀಪ ತಲುಪಲು ದಾರಿ ಏನು?

ಲಕ್ಷದ್ವೀಪವನ್ನು ವಿಮಾನ ಅಥವಾ ಶಿಪ್ ಮೂಲಕ ತಲುಪಬಹುದು. ಕೊಚ್ಚಿಯಿಂದ ಅಗತ್ತಿ ಮತ್ತು ಬಂಗಾರಮ್ ದ್ವೀಪವನ್ನು ವಿಮಾನ ಪ್ರಯಾಣ ಮೂಲಕ ತಲುಪಬಹುದು. ಇಲ್ಲಿಗೆ ಏರ್ ಇಂಡಿಯಾ ವಿಮಾನ ವ್ಯವಸ್ಥೆಯಿದೆ. ಅಗತ್ತಿಯಿಂದ ಕವರತ್ತಿ ಮತ್ತು ಕಡಮಟ್ ಗೆ ತೆರಳಲು ಬೋಟ್ ವ್ಯವಸ್ಥೆಯಿದೆ. ಕೊಚ್ಚಿಯಿಂದ ಕವರಟ್ಟಿಗೆ ಸುಮಾರು ಒಂದೂವರೆ ಗಂಟೆ ಪ್ರಯಾಣವಿದೆ.

ಇನ್ನು, ಹಡಗಿನ ಮೂಲಕ ಪ್ರಯಾಣಿಸಲು ಬಯಸುವವರಿಗೆ ಕೊಚ್ಚಿಯಿಂದ ಲಕ್ಷದ್ವೀಪದ ದ್ವೀಪಗಳಿಗೆ ಶಿಪ್ ವ್ಯವಸ್ಥೆಯಿದೆ. ಏಳು ಪ್ರಯಾಣಿಕರನ್ನು ಕರೆದೊಯ್ಯಬಹುದಾದ ಶಿಪ್ ವ್ಯವಸ್ಥೆಯಿದೆ. ಈ ಪ್ರಯಾಣ ಮಾಡಲು 14 ರಿಂದ 18 ಗಂಟೆ ಬೇಕಾಗುತ್ತದೆ.

ಲಕ್ಷದ್ವೀಪ ಟೂರ್ ಪ್ಯಾಕೇಜ್ ಸುಮಾರು 16 ಸಾವಿರ ರೂ. ಅಥವಾ 20 ಸಾವಿರ ರೂ.ಗಳಿಂದ ಆರಂಭವಾಗುತ್ತದೆ. ಹೀಗಾಗಿ ಮಾಲ್ಡೀವ್ಸ್ ಗಿಂತಲೂ ಕಡಿಮೆ ಖರ್ಚಿನಲ್ಲಿ ಹೋಗಿಬರಬಹುದು. ಮಾಲ್ಡೀವ್ಸ್ ನಂತೇ ಸುಂದರ ಕಡಲ ಕಿನಾರೆ, ಪ್ರಶಾಂತ ವಾತಾವರಣ, ನೀರಿನೊಳಗೆ ಸಾಹಸ ಕ್ರೀಡೆಗಳನ್ನು ಇಲ್ಲೂ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ