ರಾಜೀನಾಮೆ ನೀಡಲು ಮುಂದಾದ ಇಟಲಿ ಪಿಎಂ

ಶುಕ್ರವಾರ, 15 ಜುಲೈ 2022 (10:46 IST)
ರೋಮ್ : ಒಕ್ಕೂಟದ ಪತನದ ಹಿನ್ನೆಲೆ ಇಟಲಿ ಪಿಎಂ ಮಾರಿಯೋ ದ್ರಾಘಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
 
ಸಂಸತ್ತಿನಲ್ಲಿ ಪ್ರಮುಖ ಮಸೂದೆಗೆ ಮತ ಚಲಾಯಿಸಲು ಜನಪ್ರಿಯ ಒಕ್ಕೂಟದ ಪಾಲುದಾರರು ನಿರಾಕರಿಸಿದ ನಂತರ ಮಾರಿಯೋ ದ್ರಾಘಿ ಅವರು ಗುರುವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅಧ್ಯಕ್ಷರು ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದಾರೆ.

ರಾಜೀನಾಮೆಯ ನಿರಾಕರಣೆಯು ದ್ರಾಘಿ ಅವರ 17-ತಿಂಗಳ ಸರ್ಕಾರದ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಿತು. ಒಕ್ಕೂಟದೊಳಗೆ ಹೆಚ್ಚುತ್ತಿರುವ ತೀಕ್ಷ್ಣವಾದ ಭಿನ್ನಾಭಿಪ್ರಾಯಗಳಿಂದ ಸರ್ಕಾರದ ಉಳಿವಿನ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿದೆ.

ದ್ರಾಘಿ ಅವರ ವಿಶಾಲ ಸಮ್ಮಿಶ್ರ ಸರ್ಕಾರವು ಕೇಂದ್ರ ಮತ್ತು ಜನಪ್ರಿಯ 5-ಸ್ಟಾರ್ ಮೂವ್ಮೆಂಟ್ನ ಪಕ್ಷಗಳನ್ನು ಒಳಗೊಂಡಿದೆ. ಈ ರೀತಿ ಸರ್ಕಾರವನ್ನು ಇಟಲಿಯ ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ಸಹಾಯವಾಗಬೇಕು ಎಂದು ವಿನ್ಯಾಸಗೊಳಿಸಲಾಗಿತ್ತು.

ಗುರುವಾರ ದ್ರಾಘಿ ಅವರ ಸರ್ಕಾರವು ಸೆನೆಟ್ನಲ್ಲಿ ವಿಶ್ವಾಸ ಮತವನ್ನು ಗೆದ್ದುಕೊಂಡಿತು. 5-ಸ್ಟಾರ್ ಮೂವ್ಮೆಂಟ್ ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿ 26 ಬಿಲಿಯನ್ ಯುರೋಗಳನ್ನು(20,84,89,73,56,620) ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆ ಡ್ರಾಘಿ ರಾಜೀನಾಮೆಯ ನಿರ್ಧಾರಕ್ಕೆ ಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ