ಎಸ್ಟೋನಿಯಕ್ಕೆ ಅಮೆರಿಕದ ರಾಯಭಾರಿಯಾಗಿದ್ದ ಜೇಮ್ಸ್ ಡಿ. ಮೆಲ್ವಿಲ್ ರಾಜೀನಾಮೆ ನೀಡಲು ಕಾರಣವೇನು ಗೊತ್ತಾ?
ಸೋಮವಾರ, 2 ಜುಲೈ 2018 (12:01 IST)
ವಾಷಿಂಗ್ ಟನ್ : 2015ರಿಂದ ನ್ಯಾಟೊ ಸದಸ್ಯ ದೇಶವಾಗಿರುವ ಎಸ್ಟೋನಿಯಕ್ಕೆ ಅಮೆರಿಕದ ರಾಯಭಾರಿಯಾಗಿರುವ ಜೇಮ್ಸ್ ಡಿ. ಮೆಲ್ವಿಲ್ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಐರೋಪ್ಯ ಒಕ್ಕೂಟದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳು ಮತ್ತು ಐರೋಪ್ಯ ಮಿತ್ರ ದೇಶಗಳನ್ನು ಅವರು ನಡೆಸಿಕೊಳ್ಳುತ್ತಿರುವ ರೀತಿಯಿಂದ ಬೇಸತ್ತು ಅವರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಜೇಮ್ಸ್ ಡಿ. ಮೆಲ್ವಿಲ್ ಅವರು,’ ಅಮೆರಿಕದಿಂದ ಪ್ರಯೋಜನಗಳನ್ನು ಪಡೆಯಲು ಮತ್ತು ನಮ್ಮ ಪಿಗ್ಗಿ ಬ್ಯಾಂಕ್ ಮೇಲೆ ದಾಳಿ ಮಾಡಲು ಐರೋಪ್ಯ ಒಕ್ಕೂಟವನ್ನು ರಚಿಸಲಾಗಿದೆ ಹಾಗೂ ನ್ಯಾಫ್ತಾದಷ್ಟೇ ನ್ಯಾಟೊ ಕೂಡ ಕೆಟ್ಟದು ಎಂಬ ಹೇಳಿಕೆಗಳನ್ನು ಅಧ್ಯಕ್ಷರು ನೀಡಿದ್ದಾರೆ. ಈ ಹೇಳಿಕೆಗಳು ವಾಸ್ತವಿಕವಾಗಿ ತಪ್ಪು. ನಾನು ಅಧಿಕಾರದಿಂದ ಕೆಳಗಿಳಿಯಲು ಸಕಾಲ ಎನ್ನುವುದನ್ನೂ ಇದು ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ