ತೇಲುವ ಮನೆ ಕಂಡುಹಿಡಿದ ಜಪಾನ್ ಕಂಪನಿ: ಇದರ ಉಪಯೋಗವೇನು ಗೊತ್ತಾ?
ಜಪಾನ್ ವಸತಿ ನಿರ್ಮಾಣ ಅಭಿವೃದ್ಧಿ ಕಂಪನಿ ಇಚಿಜೊ ಕೊಮುಟೆನ್ ಎಂಬ ಕಂಪನಿ ನೆರೆ ಬಂದಾಗ ಸುರಕ್ಷಿತವಾಗಿರುವಂತಹ ತೇಲುವ ಮನೆಯನ್ನು ಕಂಡುಹಿಡಿದಿದೆ.
ಈ ಮನೆ ವಾಟರ್ ಪ್ರೂಫ್ ಆಗಿದ್ದು, ನೆರೆಬಂದಾಗಲೂ ಜನರು ಇದರೊಳಗೆ ಸುರಕ್ಷಿತವಾಗಿರಬಹುದು ಎಂದು ಕಂಪನಿ ಹೇಳಿಕೊಂಡಿದೆ. ಒಂದು ವೇಳೆ ಇದು ಯಶಸ್ವಿಯಾದರೆ ನೆರೆ ಬಂದಾಗ ಮನೆ ಕಳೆದುಕೊಳ್ಳುವ ಭೀತಿ ಇರಲ್ಲ ಎನ್ನುವುದು ಕಂಪನಿಯ ವಾದ.