ದಾಳಿ ಖಚಿತ ಎಂದ ಜೋ ಬೈಡನ್!

ಭಾನುವಾರ, 20 ಫೆಬ್ರವರಿ 2022 (12:56 IST)
ವಾಷಿಂಗ್ಟನ್ : ಉಕ್ರೇನ್ ಮೇಲೆ ರಷ್ಯಾ ದಾಳಿ ಖಚಿತ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪುನರುಚ್ಚರಿಸಿದ್ದಾರೆ.
 
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡೆನ್ ‘ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಯಲಿದೆ ಎಂಬುದು ನನಗೆ ಖಚಿತವಾಗಿದೆ ಮತ್ತು ಅದಕ್ಕೆ ಕಾರಣಗಳೂ ಇವೆ. 28 ಲಕ್ಷ ಅಮಾಯಕ ಜನರಿರುವ ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ದಾಳಿಗೆ ರಷ್ಯಾ ಯೋಜನೆ ರೂಪಿಸಿದೆ’ ಎಂದು ಹೇಳಿದ್ದಾರೆ.

‘ಉಕ್ರೇನ್ ಮೇಲಿನ ದಾಳಿ ಸಮರ್ಥಿಸಲು ರಷ್ಯಾ ಏನೆಲ್ಲಾ ಕಾರಣಗಳನ್ನು ನೀಡಬಹುದೋ ಅದನ್ನೆಲ್ಲಾ ನಿವಾರಿಸಲು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಏನೇನೋ ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಆದರೂ ಮುಂಬರುವ ವಾರ, ದಿನಗಳಲ್ಲಿ ರಷ್ಯಾ ದಾಳಿ ನಡೆಸಲಿದೆ ಎಂಬುದು ನನಗೆ ಖಚಿತವಾಗಲಿದೆ.

ಒಂದು ವೇಳೆ ದಾಳಿ ನಡೆದರೆ ಸಂಭವಿಸುವ ಭಾರೀ ಅನಾಹುತಕ್ಕೆ ರಷ್ಯಾ ನೇರ ಹೊಣೆಯಾಗಲಿದೆ. ಯುದ್ಧಕ್ಕೆ ನಾವು ನಮ್ಮ ಸೇನೆಯನ್ನು ಕಳುಹಿಸುವ ಸಾಧ್ಯತೆ ಇಲ್ಲವಾದರೂ, ಉಕ್ರೇನ್ ಬೆಂಬಲಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ನಿಲ್ಲಲಿವೆ. ಜೊತೆಗೆ ರಷ್ಯಾದ ಮೇಲೆ ಮತ್ತಷ್ಟುನಿರ್ಬಂಧಗಳನ್ನು ಹೇರುವುದು ಖಚಿತ’ ಎಂದು ಬೈಡೆನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ