ದುಬೈ ಆಯ್ತು, ಇದೀಗ ಪಾಕಿಸ್ತಾನವೂ ನಾವೂ ಸಹಾಯ ಮಾಡ್ತೀವಿ ಕೇರಳಕ್ಕೆ ಎನ್ನುತ್ತಿದೆ!

ಶುಕ್ರವಾರ, 24 ಆಗಸ್ಟ್ 2018 (08:11 IST)
ನವದೆಹಲಿ: ದುಬೈ ಸರ್ಕಾರ ಪ್ರವಾಹ ಪೀಡಿತ ಕೇರಳಕ್ಕೆ 700 ಕೋಟಿ ರೂ. ನೆರವು ನೀಡಲು ಹೋಗಿ ಕೇಂದ್ರ ಸರ್ಕಾರ ನಿರಾಕರಿಸಿದ ಪ್ರಕರಣ ಚರ್ಚೆಯಲ್ಲಿರುವಾಗಲೇ ಪಾಕಿಸ್ತಾನವೂ ಇದೇ ಕೆಲಸ ಮಾಡಲು ಹೊರಟಿದೆ.
 

ದುಬೈ ನಂತರ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಿದ್ಧ ಎಂದಿದ್ದಾರೆ. ಆದರೆ ಇಮ್ರಾನ್ ಕೇರಳಕ್ಕೆ ಧನ ಸಹಾಯ ಮಾಡುವ ಬಗ್ಗೆ ಮಾತನಾಡಿಲ್ಲ.

ಬದಲಾಗಿ ಮಾನವೀಯ ನೆಲೆಯಲ್ಲಿ ಯಾವುದೇ ಸಹಾಯ ಮಾಡಲು ಸಿದ್ಧ. ಕೇರಳದ ಸ್ಥಿತಿಗೆ ನಮ್ಮ ಸಂತಾಪವಿದೆ ಎಂದು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ ನೆರವು ಭಾರತ ಪಡೆಯುವುದಂತೂ ಅಸಾಧ್ಯವೇ ಹಾಗಿದ್ದರೂ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಬಗ್ಗೆ ಪಾಕ್ ಪ್ರಧಾನಿ ಈ ರೀತಿಯ ಸಹತಾಪದ ಮಾತನಾಡಿರುವುದು ನಿಜಕ್ಕೂ ವಿಶೇಷವೇ ಬಿಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ