ಚೀನಾಕ್ಕೆ ಭೇಟಿ ನೀಡಿದ ಕಿಮ್ ಜಾಂಗ್ ಉನ್

ಬುಧವಾರ, 28 ಮಾರ್ಚ್ 2018 (11:14 IST)
ಶಾಂಘೈ:  ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್  ಇದೇ ಮೊದಲ ಬಾರಿಗೆ ವಿದೇಶಿ ಪ್ರಯಾಣವನ್ನು ಕೈಗೊಂಡಿದ್ದಾರೆ. ಉತ್ತರ ಕೋರಿಯಾದ ಆಡಳಿತ  ಚುಕ್ಕಾಣಿ ಹಿಡಿದಾಗಿನಿಂದ ಕಿಮ್  ಯಾವುದೇ ದೇಶದೊಂದಿಗೂ ಉತ್ತಮ ಬಾಂಧವ್ಯ ಹೊಂದಲು ತಯಾರಿರಲಿಲ್ಲ. ಇದೀಗ ಕಿಮ್ ಚೀನಾಕ್ಕೆ ಭೇಟಿ ನೀಡಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.


ಚೀನಾ ಅಧ್ಯಕ್ಷ ಗ್ಸೈ ಜಿನ್ಪಿಂಗ್ ಮತ್ತು ಉನ್ ನಡುವೆ ಮಹತ್ವದ ಮಾತುಕತೆ ನಡೆದಿದೆ ಎಂದು ಪತ್ರಿಕೆ ವರದಿ ಮಾಡಿದೆ. ಉತ್ತರ ಕೋರಿಯಾಕ್ಕೆ ಬರುವಂತೆ ಕಿಮ್ ನೀಡಿದ ಆಮಂತ್ರಣವನ್ನು ಜಿನ್ಪಿಂಗ್ ಸ್ವೀಕರಿಸಿದ್ದು, ಅವರೂ ಉತ್ತರ ಕೋರಿಯಾಕ್ಕೆ ಭೇಟಿ ನೀಡಲಿದ್ದಾರಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ