ಉರಿ ದಾಳಿಗೆ ನಾವೇ ಹೊಣೆ: ಪಾಕಿಸ್ತಾನದಲ್ಲಿ ಪೋಸ್ಟರ್ ಲಗತ್ತಿಸಿದ ಲಷ್ಕರ್ ಸಂಘಟನೆ

ಮಂಗಳವಾರ, 25 ಅಕ್ಟೋಬರ್ 2016 (17:10 IST)
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ 20 ಸೈನಿಕರು ಹತ್ಯೆಯಾದ ಘಟನೆಗೆ ನಾವೇ ಕಾರಣ ಎಂದು ಲಷ್ಕರ್-ಎ-ತೊಯಿಬಾ ಹೊಣೆಯನ್ನು ಹೊತ್ತುಕೊಂಡಿದೆ. ಘಟನೆಯಲ್ಲಿ ಪಾಕ್ ಉಗ್ರರ ಕೈವಾಡವಿಲ್ಲ ಎಂದು ಹೇಳುತ್ತಿದ್ದ ಷರೀಪ್ ಸರಕಾರಕ್ಕೆ ಮುಖಭಂಗವಾಗಿದೆ.
 
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜರನ್‌ವಾಲಾ ಪ್ರದೇಶದಲ್ಲಿ ಲಷ್ಕರ್-ಎ-ತೊಯಿಬಾ ಸಂಘಟನೆ ಪೋಸ್ಟರ್‌ಗಳನ್ನು ಅಂಟಿಸಿದ್ದು, ಉರಿ ದಾಳಿಗೆ ನಾವೇ ಹೊಣೆಯಾಗಿದ್ದೇವೆ. ಇಂದು ಉಗ್ರರ ಸ್ಮರಣಾರ್ಥವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರಾರ್ಥನೆಯ ನಂತರ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ಭಾಷಣ ಮಾಡಲಿದ್ದಾರೆ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.
 
ಉರಿ ಸೇನಾ ಕೇಂದ್ರದ ಮೇಲೆ ದಾಳಿಗೆ ಪಾಕ್ ಉಗ್ರರೇ ಕಾರಣ ಎಂದು ಆರೋಪಿಸಿದ್ದ ಭಾರತಕ್ಕೆ ಮತ್ತೊಂದು ಬಲವಾದ ಸಾಕ್ಷ್ಯ ದೊರೆತಂತಾಗಿದೆ. 
 
ಕಾಶ್ಮಿರದಲ್ಲಿ 177 ಹಿಂದೂ ಸೈನಿಕರನ್ನು ಹತ್ಯೆ ಮಾಡಿ ನರಕಕ್ಕೆ ಕಳುಹಿಸಿದ ಸಿಂಹದ ಹೃದಯವಿರುವ ಉಗ್ರ ಅಬು ಸಿರಾಗಾ ಮೊಹಮ್ಮದ್ ಅನಾಸ್ ಹುತಾತ್ಮನಾಗಿದ್ದರಿಂದ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉರ್ದುವಿನಲ್ಲಿ ಬರೆಯಲಾಗಿದೆ.
 
ಕೇಂದ್ರ ಸರಕಾರಕ್ಕೆ ಉರಿ ಉಗ್ರರ ದಾಳಿಯ ಬಗ್ಗೆ ಪ್ರಮುಖ ಸಾಕ್ಷಿ ದೊರೆತಂತಾಗಿದ್ದು, ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಮತ್ತಷ್ಟು ಅವಕಾಶ ದೊರೆತಂತಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ