ಬ್ರಿಟನ್ ಸರಕಾರದ ಕ್ರಮವನ್ನು ಟೀಕಿಸಿದ ಲಂಡನ್ ಮೇಯರ್ ಸಾದಿಕ್ ಖಾನ್
ಸೋಮವಾರ, 25 ಜೂನ್ 2018 (11:44 IST)
ಲಂಡನ್ : ಲಂಡನ್ ಮೇಯರ್ ಸಾದಿಕ್ ಖಾನ್ ಅವರು ವಿದ್ಯಾರ್ಥಿ ವೀಸಾ ಪಡೆಯುವ ಸುಲಭ ಪ್ರಕ್ರಿಯೆಯಿಂದ ಭಾರತೀಯರನ್ನು ಹೊರಗಿಟ್ಟ ಬ್ರಿಟನ್ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.
ಶನಿವಾರ ಸಂಜೆ ಲಂಡನ್ ನಲ್ಲಿ ನಡೆದ 'ಬ್ರಿಟನ್-ಭಾರತ ಪ್ರಶಸ್ತಿ ಪ್ರದಾನ'ದ ನೇಪಥ್ಯದಲ್ಲಿ ಮಾತನಾಡಿದ ಸಾದಿಕ್ ಖಾನ್ ಅವರು,’ಅಕ್ರಮ ವಲಸೆಯೊಂದಿಗೆ ವಿದ್ಯಾರ್ಥಿಗಳನ್ನು ತಳುಕು ಹಾಕುವುದು ಅತ್ಯಂತ ಆಕ್ಷೇಪಾರ್ಹವಾಗಿದೆ ಹಾಗೂ ಅದು ವಿಷಯವನ್ನು ಸಂಕೀರ್ಣಗೊಳಿಸುತ್ತದೆ. ವಲಸೆಗೆ ಪ್ರತಿಕೂಲ ವಾತಾವರಣ ಈಗಲೂ ಇದೆ. ಅದು ಬದಲಾಗುತ್ತದೆ ಎನ್ನುವುದನ್ನು ಸೂಚಿಸುವ ನೈಜ ಗಟ್ಟಿ ಪುರಾವೆಗಳು ನಮಗೆ ಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ