London viral video: ಈಕೆ ಕೈಯಲ್ಲಿ ಊಟ ಮಾಡಿದ್ದೇ ತಪ್ಪಾಯ್ತು, ಏನಾಗಿದೆ ವಿಡಿಯೋ ನೋಡಿ

Sampriya

ಶನಿವಾರ, 31 ಮೇ 2025 (19:16 IST)
Photo Credit X
ಬೆಂಗಳೂರು:  ಭಾರತ, ಮಧ್ಯಪ್ರಾಚ್ಯ, ಆಫ್ರಿಕಾ ಸೇರಿದಂತೆ ಆಗ್ನೇಯ ಮುಂತಾದ ಸ್ಥಳಗಳಲ್ಲಿ ಕೈಯಲ್ಲೇ ಊಟವನ್ನು ಸೇವಿಸುವುದು ಸರ್ವೇ ಸಾಮಾನ್ಯ. ಆದರೆ ಲಂಡನ್‌ನಲ್ಲಿ ಮಹಿಳೆಯೊಬ್ಬಳು ಚಮಚ ಬಳಸದೆ ತನ್ನ ಕೈಯಲ್ಲೇ ಊಟ ಮಾಡಿದ್ದಕ್ಕೆ ಆಕೆಯನ್ನು ಅಪರಾಧ ಮಾಡಿದ ಹಾಗೇ ಬಿಂಬಿಸಲಾಗಿದೆ.

ಹೌದು ಭಾರತದಲ್ಲಿ ಕೈಯಲ್ಲೇ ಆಹಾರ ಸೇವಿಸುವುದು ಆರೋಗ್ಯ ದೃಷ್ಟಿಯಲ್ಲಿ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಲಂಡನ್‌ನಲ್ಲಿ ಮಹಿಳೆಯೊಬ್ಬರು ತನ್ನ ಕೈಯಲ್ಲಿ ಬಿರಿಯಾನಿಯನ್ನು ಸೇವಿಸಿದ್ದಕ್ಕೆ ಭಾರೀ ಟ್ರೋಲ್ ಮಾಡಲಾಗಿದೆ.

ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಚಮಚವಿಲ್ಲದೆ ಆಹಾರ ಸೇವಿಸುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಅವರನ್ನು ಟ್ರೋಲ್ ಮಾಡಿದ್ದಾರೆ.

ಯಾರೋ ಚಮಚ ಅಥವಾ ಫೋರ್ಕ್ ಇಲ್ಲದೆ ತಿನ್ನುವುದನ್ನು ವೀಡಿಯೊದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಆಕೆ ಚಮಚವಿಲ್ಲದೆ ಊಟ ಮಾಡಿದ್ದಕ್ಕೆ ಏನೋ ಅಪರಾಧ ಮಾಡಿದ ಹಾಗೇ ಆಕೆಯನ್ನು ಟ್ರೋಲ್ ಮಾಡಲಾಗಿದೆ.  <blockquote class="twitter-tweet"><p lang="en" dir="ltr">So this is london tube the new trend of eating biryani with bare hands is next sensation ????????<a href="https://t.co/WaxbdvW8Pz">pic.twitter.com/WaxbdvW8Pz</a></p>&mdash; •J• (@cjy) <a href="https://twitter.com/cjy/status/1927726555033178333?ref_src=twsrc%5Etfw">May 28, 2025</a></blockquote> <script async src="https://platform.twitter.com/widgets.js" charset="utf-8"></script>


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ