ಅಳಿವಿನಂಚಿನಲ್ಲಿರುವ 'ಲಾರ್ಜ್ ಬ್ಲೂ' ತಳಿಯ ಚಿಟ್ಟೆಗಳನ್ನು ಕೊಂದಿದ್ದಕ್ಕೆ ಬ್ರಿಟನ್ನಲ್ಲಿ ಫಿಲಿಪ್ ಕಲ್ಲೆನ್ (57) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫಿಲಿಪ್ 2015 ಜೂನ್ ತಿಂಗಳಲ್ಲಿ ಎರಡು ರಕ್ಷಿತ ಚಿಟ್ಟೆಯನ್ನು ಹಿಡಿದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಚಿಟ್ಟೆಗಳು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
ಈ ಕುರಿತು ಬುಧವಾರ ಅವರು ಬ್ರಿಸ್ಟಲ್ನ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಿಚಾರಣೆಯನ್ನೆದುರಿಸಿದರು.
ತಾವು ಚಿಟ್ಟೆ ಕೊಂದಿಲ್ಲ ಎಂದು ಫಿಲಿಪ್ ವಾದಿಸುತ್ತಿದ್ದಾರೆ. ಸದ್ಯ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ