ವ್ಯಕ್ತಿಯ ಕೊಂದು ಹೃದಯವನ್ನು ಆಲೂಗಡ್ಡೆ ಹಾಕಿ ಬೇಯಿಸಿ ತಿಂದ!

ಗುರುವಾರ, 25 ಫೆಬ್ರವರಿ 2021 (10:22 IST)
ನ್ಯೂಯಾರ್ಕ್: ಅಮೆರಿಕಾದ ಒಖ್ಲಾಮಾದಲ್ಲಿ ಅಸಾಮಿಯೊಬ್ಬ ಒಬ್ಬಾತನನ್ನು ಕೊಲೆ ಮಾಡಿ ಬಳಿಕ ಆತನ ಹೃದಯವನ್ನು ಆಲೂಗಡ್ಡೆ ಹಾಕಿ ಬೇಯಿಸಿ ತನ್ನ ಸಂಬಂಧಿಕರಿಗೇ ಉಣಬಡಿಸಿದ ಘಟನೆ ನಡೆದಿದೆ.


ಡ್ರಗ್ ವ್ಯಸನಿಯಾಗಿದ್ದ ಆರೋಪಿ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕ ಮತ್ತೆ ತನ್ನ ಕೆಟ್ಟ ಬುದ್ಧಿ ತೋರಿಸಿದ ಪಾಪಿ ನೆರೆಮನೆಯವನನ್ನೇ ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಮಾವನ ಮನೆಗೆ ಹೋಗಿ ಅಲ್ಲಿ ಹತ್ಯೆ ಮಾಡಿದ ವ್ಯಕ್ತಿಯ ಹೃದಯವನ್ನು ಬೇಯಿಸಿಕೊಟ್ಟಿದ್ದಲ್ಲದೆ, ಬಳಿಕ ತನ್ನ ಮಾವ, ಅವರ ನಾಲ್ಕು ವರ್ಷದ ಮೊಮ್ಮಗಳನ್ನೂ ಹತ್ಯೆ ಮಾಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ