ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಗಂಡನನ್ನೇ ಮುಗಿಸಿದಳು!

ಬುಧವಾರ, 24 ಫೆಬ್ರವರಿ 2021 (09:35 IST)
ಮೀರತ್: ಅಕ್ರಮ ಸಂಬಂಧಕ್ಕಾಗಿ ಅಡ್ಡಿ ಮಾಡಿದ್ದಕ್ಕೆ ಪತ್ನಿಯೇ ಪತಿಯ ಜೀವ ತೆಗೆದ ಘಟನೆ ಈಗ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.


ಫೆಬ್ರವರಿ 16 ರಿಂದ ಪತಿ ನಾಪತ್ತೆಯಾಗಿದ್ದ. ಅದೇ ದಿನ ಆಕೆ ತನ್ನ ಮೇಲೆ ಅನುಮಾನ ಬರದೇ ಇರಲು ತವರು ಮನೆಗೆ ಹೋಗಿದ್ದಳು. ಆದರೆ ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ. ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನ ಜೊತೆ ಸೇರಿಕೊಂಡು ಪತ್ನಿ ಈ ಕೃತ್ಯವೆಸಗಿದ್ದಾಳೆ. ಗಂಡನಿಗೆ ಕಂಠಪೂರ್ತಿ ಕುಡಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ