ಈ ಮುಂದುವರಿದ ದೇಶದಲ್ಲಿ ಮಹಿಳೆಯರು ಹೇಳಿದ್ದೇ ಪುರುಷರು ಕೇಳಬೇಕು..!

ಬುಧವಾರ, 6 ಡಿಸೆಂಬರ್ 2023 (11:39 IST)
ಬಹುಶಃ ನೀವು  ಕಲ್ಪಿಸಿರದ ಸತ್ಯವಿದು. ಯುರೋಪ್‌ನಲ್ಲೊಂದು ದೇಶವಿದೆ. ಈ ದೇಶದಲ್ಲಿ  ಪುರುಷರು ಮಹಿಳೆಯರಿಗೆ ಗುಲಾಮರಾಗಿದ್ದಾರೆ. ಆಶ್ಚರ್ಯಕರವಾದ ವಿಷಯವೆಂದರೆ ವಿಶ್ವದ ಇತರ ಭಾಗದಲ್ಲಿ ಮಹಿಳೆಯ ಮೇಲೆ ಪುರುಷ ಪೈಶಾಚಿಕತೆಯನ್ನು ಪ್ರದರ್ಶಿಸಿದರೆ, ಇಲ್ಲಿ ಮಹಿಳೆಯರೇ ಪುರುಷರ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗುತ್ತಾರೆ. ಇಲ್ಲಿ ಪುರುಷರು ಗುಲಾಮರು ಮಾಡುವ ಎಲ್ಲಾ ಕೆಲಸಗಳನ್ನು ಅಕ್ಷರಶಃ ಪಾಲಿಸಬೇಕಾಗುತ್ತದೆ. ಈ ದೇಶದಲ್ಲಿ ಪುರುಷರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡಲಾಗುತ್ತದೆ.   
 
ಹೆಂಡತಿಯ ಜತೆ ಸ್ವಲ್ಪ ಸ್ನೇಹ, ಪ್ರೀತಿಯಿಂದ ಇದ್ದರೆ ಸಾಕು. ಇವನೊಬ್ಬ ಹೆಂಡತಿಯ ಗುಲಾಮ ಎಂದು ಲೇವಡಿ ಮಾಡುವುದು ನಮ್ಮ ಭಾರತೀಯ ಸಮಾಜದಲ್ಲಿ ಸಾಮಾನ್ಯ. ಪುರುಷ ಪ್ರಧಾನ ಮನಸ್ಥಿತಿಯ ಹೆಚ್ಚಿನ ಭಾರತೀಯರು ಮತ್ತು ಹೆಚ್ಚಿನ ಸಂಪ್ರದಾಯಸ್ಥರಪ್ರಕಾರ ಹೆಂಡತಿ ಗಂಡನ ಆಜ್ಞಾಧಾರಕಿಯಾಗಿರಬೇಕು. ಅಡುಗೆ ಏನು ಮಾಡಬೇಕೆಂದು ಸಹ ಗಂಡನನ್ನು ಕೇಳಿ ಮಾಡುವ, ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕೆಂದರೂ ಗಂಡನನ್ನು ಕೇಳಿ ಹೊರ ಬೀಳುವ ಪರಿಸ್ಥಿತಿ ಇಂದಿಗೂ ಹೆಚ್ಚಿನ ಭಾರತೀಯ ಕುಟುಂಬದಲ್ಲಿ ಕಂಡುಬರುವ ವಾಸ್ತವ.
 
ನವವಿವಾಹಿತನ ಕಿವಿಯಲ್ಲಿ ಹೆಚ್ಚಿನ ಹಿರಿಕರು ನೀಡುವ ಸಲಹೆ -' ನಿನ್ನ ಹೆಂಡತಿನಾ ಈಗ್ಲಿಂದ್ಲೆ ಹದ್ದುಬಸ್ತಿನಲ್ಲಿಟ್ಟುಕೋ.. ಆಮೇಲೆ ಕಷ್ಟ ಆಗತ್ತೆ ಎನ್ನುವುದು'...  ನಮ್ಮ ದೇಶದ, ಜತೆಗೆ ವಿಶ್ವದ ಮಟ್ಟಿಗೆ ನೋಡುವುದಾದರೂ  ಶತಶತಮಾನಗಳಿಂದ ಹೆಣ್ಣನ್ನು ಗಂಡಿನ ಅಡಿಯಾಳಾಗಿ, ಭೋಗದ ವಸ್ತುವಾಗಿಯೇ ನೋಡಲಾಗುತ್ತದೆ. 
 
ಸ್ತ್ರೀಯರನ್ನು ದಮನ ಮಾಡಲು, ಶೋಷಿಸಲು ಸದಾ ತತ್ಪರರಾಗಿರುವ ಗಂಡಸರನ್ನು ಮಹಿಳಾ ಸಂಕುಲ ಗುಲಾಮರನ್ನಾಗಿಸುವುದು ಕನಸಿನ ಮಾತೇ ಎನ್ನುತ್ತೀರಾ? ಆದರೆ ವಿಶಾಲ ವಿಶ್ವದಲ್ಲಿ ಒಂದಕ್ಕೊಂದು ವಿರೋಧವಾಗಿರುವುದು ಎಲ್ಲವೂ ಅಸ್ತಿತ್ವದಲ್ಲಿದೆ ಎನ್ನುತ್ತಾರೆ. ಹಾಗೆಯೇ ಇದು ಸಹ...
 
ವಿಶ್ವದಲ್ಲಿ ಇಂತಹದೊಂದು ಅನನ್ಯ ರಾಷ್ಟ್ರವಿದ್ದು ಇಲ್ಲಿ ಮಹಿಳೆಯರೇ ಅಧಿಕಾರ ನಡೆಸುತ್ತಾರೆ. 'ವುಮೆನ್ ಓವರ್ ಮೆನ್' ಎನ್ನುವ ಘೋಷಣೆ ಪಾಲಿಸುವ ಈ ರಾಷ್ಟ್ರದಲ್ಲಿ ಪುರುಷರನ್ನು ಕೇವಲ ಗುಲಾಮಗಿರಿಗಾಗಿಯೇ ಇಟ್ಟುಕೊಳ್ಳಲಾಗುತ್ತದೆ. ಇಷ್ಟೆ ಅಲ್ಲ. ಈ ದೇಶದಲ್ಲಿ ಸರಕಾರವನ್ನು ಕೂಡಾ ಮಹಿಳೆಯರೇ ನಡೆಸುತ್ತಾರೆ. ಪ್ರತಿಯೊಬ್ಬ ಮಹಿಳೆಯು ತನ್ನ ಕೆಲಸಗಳಿಗಾಗಿ ಪುರುಷರನ್ನು ಗುಲಾಮರಾಗಿ ಇಟ್ಟುಕೊಳ್ಳುತ್ತಾರೆ. ಗುಲಾಮರಾದ ಪುರುಷರೊಂದಿಗೆ ಮಹಿಳೆ ಯಾವ ರೀತಿ ಬೇಕಾದರೂ ವರ್ತಿಸಬಹುದು, ದೌರ್ಜನ್ಯವೆಸಗಬಹುದಂತೆ..   
 
ಮಹಿಳೆಯರು ಪುರುಷರನ್ನು ಗುಲಾಮರಾಗಿಟ್ಟುಕೊಳ್ಳುವಂತಹ ದೇಶದ ಹೆಸರು "ಅದರ್ ವರ್ಲ್ಡ್ ಕಿಂಗ್‌ಡಮ್". ಯುರೋಪ್ ಒಕ್ಕೂಟದ ಭಾಗವಾದ ಜೆಕ್ ಗಣರಾಜ್ಯದಲ್ಲಿರುವ ಈ ದೇಶ 1996ರಲ್ಲಿ ಅಸ್ತಿತ್ವಕ್ಕೆ ಬಂತು. ಈ ದೇಶದ ರಾಣಿ ಪೆಟ್ರಿಸಿಯಾ -1 ರಾಜಾಧಿಕಾರವನ್ನು ನಡೆಸುತ್ತಾಳೆ. ಈ ದೇಶಕ್ಕೆ ಇತರ ರಾಷ್ಟ್ರಗಳು ದೇಶವೆಂದು ಮಾನ್ಯತೆ ನೀಡಿಲ್ಲ. ಆದರೆ, ಈ ದೇಶದಲ್ಲಿ ತನ್ನದೆ ಆದ ಕರೆನ್ಸಿ, ಪಾಸ್‌ಪೋರ್ಟ್, ಧ್ವಜ ಸೇರಿದಂತೆ ಪೊಲೀಸ್ ಪಡೆಯನ್ನು ಹೊಂದಿದೆ.  
 
ಮಹಿಳೆಯರು ಪುರುಷರನ್ನು ಗುಲಾಮರಾಗಿಟ್ಟುಕೊಳ್ಳುವ ಈ ದೇಶದಲ್ಲಿ ಮತ್ತೊಂದು ಅಚ್ಚರಿಯ ವಿಷಯವೆಂದರೆ, ಪ್ರವಾಸಕ್ಕಾಗಿ ದೇಶಕ್ಕೆ ಭೇಟಿ ನೀಡುವ ಪುರುಷರು ರಾಣಿ ಕುಳಿತುಕೊಳ್ಳುವ ಸೋಫಾ ಅಥವಾ ಕುರ್ಚಿಯನ್ನು ಸಿದ್ದಪಡಿಸಿ ಕೊಡಬೇಕಾಗುತ್ತದೆ   
 
ಪುರುಷರಿಗಿಂತ ಮಹಿಳೆಯರು ಹೆಚ್ಚು ಎನ್ನುವ ಭಾವನೆ ಹೊಂದಿರುವ ಈ ದೇಶದಲ್ಲಿ ರಾಣಿಗಾಗಿ ಹೆಚ್ಚಿನ ಪುರುಷರನ್ನು ಗುಲಾಮರಾಗಿ ಮಾಡಿಕೊಳ್ಳುವ ಹೀನ ಕತೆ ಇಲ್ಲಿಗೆ ಅಂತ್ಯವಾಗುವುದಿಲ್ಲ. ಇದೊಂದು ತುಂಬಾ ಉದ್ದನೆಯ ದಾರುಣ ವ್ಯಥೆಯಾಗಿದೆ.
 
ಇಲ್ಲಿನ ಕಾನೂನಿನ ಪ್ರಕಾರ, ಒಂದು ವೇಳೆ ಯಾವುದೇ ದೇಶದ ಮಹಿಳೆ ಇಲ್ಲಿನ ನಾಗರಿಕತ್ವ ಪಡೆಯಲು ಬಯಸಿದಲ್ಲಿ ಆಕೆ ಕನಿಷ್ಠ ಒಬ್ಬ ಪುರುಷನನ್ನು ಗುಲಾಮನಾಗಿ ಹೊಂದಿರಬೇಕು. ಗುಲಾಮನಾಗಿರುವ ಪುರುಷ ರಾಣಿಯ ಅರಮನೆಯಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ದುಡಿಯಬೇಕು. ಮಹಿಳೆಯರು ತಮ್ಮ ಕಾಲಿನ ಮೇಲೆ ಸುರಿಸಿ ಚೆಲ್ಲಿದ ಮದ್ಯವನ್ನು  ಗುಲಾಮ ಕುಡಿಯಬೇಕಾಗುತ್ತದೆ.   
 
ಹೀಗೆ ಸಹಿಸಲಾರದ ಅಮಾನವೀಯತೆಯನ್ನು ಪುರುಷರ ಮೇಲೆ ಹೇರಲಾಗುತ್ತಿದೆ ಈ ದೇಶದಲ್ಲಿ... ನಿಜಕ್ಕೂ ಜಾಗತಿಕ ಸಮಾಜ ತಲೆ ತಗ್ಗಿಸಬೇಕು ಇದಕ್ಕೆ....

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ