ಮಂಚಕ್ಕೆ ಬಾ ಇಲ್ಲಾಂದ್ರೆ ಕೆಲ್ಸದಿಂದ ವಜಾ: ಬೆದರಿಸಿದ ಅಧಿಕಾರಿ ಜೈಲು ಪಾಲು

ಮಂಗಳವಾರ, 5 ಡಿಸೆಂಬರ್ 2023 (14:02 IST)
ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಅರಸಿ ಬರುವ ಯುವತಿಯರಿಗೆ ಕಚೇರಿ ಕೆಲಸದಲ್ಲಿ ಎಂತೆಂತಹ ಕಷ್ಟಗಳನ್ನು ಎದುರಿಸುತ್ತಾರೋ ಅದು ಅವರಿಗೆ ಮಾತ್ರ ಗೊತ್ತು. ಪುರುಷ ಸಿಬ್ಬಂದಿಗಳ ಕಣ್ಣು ಸದಾ ಮಹಿಳಾ ಸಿಬ್ಬಂದಿಗಳ ಮೇಲೆ ಇರುತ್ತದೆ. ಒಂದು ವೇಳೆ ಕಚೇರಿಯ ಬಾಸ್ ಕಚ್ಚೆಹರುಕನಾಗಿದ್ದಾರೆ ಅಂತಹ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಕಷ್ಟ ಹೇಳತೀರದು. ಅಂತಹದೊಂದು ಘಟನೆ ಇಲ್ಲಿ ನಡೆದಿದೆ.
 
ಕಾರು ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬಳು ಕೇಂದ್ರದ ಡಿಜಿಎಂ ತಮಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಲ್ಲದೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
 
ದಾದಾನಗರ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಾರು ಕಂಪೆನಿಯಲ್ಲಿ ಗ್ರಾಹಕ ವ್ಯವಹಾರಗಳ ವಿಭಾಗದ ಅಧಿಕಾರಿಯಾಗಿದ್ದ ಮಹಿಳೆ ಪ್ರಕಾರ, ಕಂಪೆನಿಯ ಉಪವ್ಯವಸ್ಥಾಪಕರಾದ ಫಹೀಮ್ ಖಾನ್ ಕಳೆದೊಂದು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಅನೈತಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ