ಗೂಗಲ್ನ 10 ಸಾವಿರ ಉದ್ಯೋಗಿಗಳು ಮನೆಗೆ!

ಬುಧವಾರ, 23 ನವೆಂಬರ್ 2022 (08:22 IST)
ವಾಷಿಂಗ್ಟನ್ : ಟ್ವಿಟ್ಟರ್, ಅಮೆಜಾನ್, ಮೆಟಾ ಬಳಿಕ ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಆವರಿಸುತ್ತಿದ್ದಂತೆ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಖರ್ಚು ಕಡಿಮೆ ಮಾಡಲು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ.

ಈಗ ಕಳಪೆ ಕಾರ್ಯಕ್ಷಮತೆ ಆಧಾರದ ಮೇಲೆ ಸುಮಾರು 10 ಸಾವಿರ ಉದ್ಯೋಗಿಗಳನ್ನು ಅಥವಾ ಅದರ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಕಳಪೆ ಕಾರ್ಯಕ್ಷಮತೆ ಗುರುತಿಸಲು ಗೂಗಲ್ ಶ್ರೇಯಾಂಕ ಪದ್ಧತಿ ಅನುಸರಿಸಲಿದೆ. ಯಾರಿಗೆ ಕಡಿಮೆ ರೇಟಿಂಗ್ ಸಿಗುತ್ತದೋ ಅವರನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ಪ್ಲ್ಯಾನ್ ಮಾಡಿದೆ.

ಅಲ್ಫಾಬೆಟ್ ಕಂಪನಿಯಲ್ಲಿ 1.87 ಲಕ್ಷ ಉದ್ಯೋಗಿಗಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಅಲ್ಫಾಬೆಟ್ 13.9 ಶತಕೋಟಿ ಡಾಲರ್ ನಿವ್ವಳ ಲಾಭಗಳಿಸಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.27ರಷ್ಟು ಕುಸಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ