ಟೆಕ್ ಕಂಪನಿಗಳಿಂದ 1.2 ಲಕ್ಷಕ್ಕೂ ಮಂದಿ ವಜಾ

ಶುಕ್ರವಾರ, 24 ಮಾರ್ಚ್ 2023 (12:50 IST)
ನವದೆಹಲಿ : ಜನವರಿ-ಫೆಬ್ರವರಿ ತಿಂಗಳಿನಲ್ಲಿ 417 ಕಂಪನಿಗಳು 1.2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಜಾಗತಿಕವಾಗಿ ವಜಾಗೊಳಿಸಿದೆ. ಬಿಗ್ ಟೆಕ್ನಿಂದ ಸ್ಟಾರ್ಟ್ಅಪ್ನವರೆಗೆ 1,046 ಕಂಪನಿಗಳು 1.61 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು 2022ರಲ್ಲಿ ವಜಾಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
 
ಕಳೆದ ವರ್ಷದಿಂದ ಈ ಫೆಬ್ರವರಿವರೆಗೆ ಒಟ್ಟು 3 ಲಕ್ಷ ಟೆಕ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ವರ್ಗಾವಣೆ, ಅಧಿಕ ನೇಮಕ, ಕಂಪನಿಯ ಆರ್ಥಿಕ ಪರಿಸ್ಥಿತಿ, ಕೋವಿಡ್ 19 ಸಾಂಕ್ರಮಿಕದಿಂದ ಆದ ನಷ್ಟದಿಂದಾಗಿ ಟೆಕ್ ಕಂಪನಿಗಳು ಹೆಚ್ಚು ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.

ಕಳೆದ ವರ್ಷ ನವೆಂಬರ್ನಲ್ಲಿ ಘೋಷಿಸಿದಂತೆಯೇ ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ತಿಂಗಳ ಆರಂಭದಲ್ಲಿ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಫೇಸ್ಬುಕ್ ಮಾತೃಸಂಸ್ಥೆ ಮೆಟಾ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ