165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

ಮಂಗಳವಾರ, 6 ಜೂನ್ 2023 (12:39 IST)
ವಾಷಿಂಗ್ಟನ್: ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದೆ ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ ಆರೋಪಿಸಿದೆ.
 
ಇದನ್ನು ಇತ್ಯರ್ಥಗೊಳಿಸಲು ಇದೀಗ ಮೈಕ್ರೋಸಾಫ್ಟ್ ಬರೋಬ್ಬರಿ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ.) ಪಾವತಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಮೈಕ್ರೋಸಾಫ್ಟ್ನ ಎಕ್ಸ್ಬಾಕ್ಸ್ ಗೇಮಿಂಗ್ ಸಿಸ್ಟಂಗೆ ಸೈನ್ಅಪ್ ಆಗಿರುವ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ಅಥವಾ ಪೋಷಕರ ಒಪ್ಪಿಗೆ ಪಡೆಯದೇ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಇದು ಅಮೆರಿಕದ ಮಕ್ಕಳ ಆನ್ಲೈನ್ ಗೌಪ್ಯತೆ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ಎಫ್ಟಿಸಿ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ