ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್

ಶುಕ್ರವಾರ, 2 ಜೂನ್ 2023 (10:34 IST)
ವಾಷಿಂಗ್ಟನ್ : ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್ನಲ್ಲಿ ನಡೆದ ಏರ್ಫೋರ್ಸ್ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ವೇದಿಕೆಗೆ ಆಗಮಿಸುತ್ತಿದ್ದಂತೆ ಸ್ಟೇಜ್ ಮೇಲೆ ಎಡವಿ ಬಿದ್ದಿದ್ದಾರೆ.

ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್ಗಳೊಂದಿಗೆ ಹಸ್ತಲಾಘವ ಮಾಡಿದರು.

ಬಳಿಕ ಮುಂದಿನ ಹೆಜ್ಜೆ ಇಟ್ಟ ತಕ್ಷಣ ಕಾಲು ತಡವರಿಸಿ ಬಿದ್ದಿದ್ದಾರೆ, ಕೂಡಲೇ ಏರ್ಫೋರ್ಸ್ ಅಧಿಕಾರಿಗಳು ಎದ್ದೇಳಲು ಸಹಕರಿಸಿದ್ದಾರೆ. ಎಡವಿ ಬಿದ್ದ 80 ವರ್ಷದ ಬೈಡನ್ ಬಳಿಕ ಡಿಪ್ಲೊಮಾ ಕೆಡೆಟ್ಗಳಿಗೆ ಪದವಿ ಪ್ರದಾನಮಾಡಿ, ವೇದಿಕೆಯಿಂದ ಹೊರಗುಳಿದಿದ್ದಾರೆ. ನಂತರ ಅಲ್ಲಿಂದ ಕ್ಷೇಮವಾಗಿ ನಡೆದುಕೊಂಡು ಶ್ವೇತ ಭವನಕ್ಕೆ ತೆರಳಿದರು.

ಸದ್ಯ ಅಧ್ಯಕ್ಷರು ಗಾಯಗೊಂಡಿಲ್ಲ, ಫಿಟ್ ಆಗಿದ್ದಾರೆ ಎಂಬುದಾಗಿ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ