ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ: ಡಾ.ಫೌಸಿ!

ಸೋಮವಾರ, 2 ಆಗಸ್ಟ್ 2021 (15:14 IST)
ವಾಷಿಂಗ್ಟನ್(ಆ.02): ಈಗಾಗಲೇ 3.5 ಕೋಟಿ ಸೋಂಕಿತರು ಮತ್ತು 6.30 ಲಕ್ಷ ಜನರ ಸಾವಿನಿಂದ ತತ್ತರಿಸಿರುವ ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟುನೋವು ಮತ್ತು ಯಾತನೆಯನ್ನು ಅನುಭವಿಸಬೇಕಾಗಿ ಬರಲಿದೆ ಎಂದು ದೇಶದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಆ್ಯಂಟೋನಿ ಫೌಸಿ ಎಚ್ಚರಿಕೆ ನೀಡಿದ್ದಾರೆ.

* ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞರ ಎಚ್ಚರಿಕೆ
* ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಕಾದಿದೆ: ಡಾ.ಫೌಸಿ
ದೇಶದಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಫೌಸಿ, ಅಮೆರಿಕದಲ್ಲಿ ಲಸಿಕೆ ಪಡೆಯದವರಿಂದ ಕೊರೋನಾ ವ್ಯಾಪಿಸುವಿಕೆ ತೀವ್ರತೆ ಭಾರೀ ಹೆಚ್ಚಳವಾಗಲಿದೆ. ಲಸಿಕೆ ಪಡೆಯದ ನಾಗರಿಕರು ವೈರಸ್ ತೀವ್ರವಾಗಿ ಹಬ್ಬಲು ಕಾರಣವಾಗುವ ಮೂಲಕ ಇತರ ಜನರ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಸೋಂಕು ನಿಗ್ರಹಕ್ಕೆ ಲಾಕ್ಡೌನ್ ಹೇರದೇ ಇರಬಹುದು. ಆದರೆ ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಜನಗಳಲ್ಲಿ ಜನರು ಇನ್ನಷ್ಟುಯಾತನೆ ಅನುಭವಿಸಬೇಕಾಗಿ ಬರುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಅಮೆರಿಕದಲ್ಲಿ ಕಳೆದ ಕೆಲ ದಿನಗಳಿಂದ 50000ದಿಂದ 99000ದವರೆಗೂ ಹೊಸ ಕೇಸು ದಾಖಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ