ಟೋಕಿಯೋ ಒಲಿಂಪಿಕ್ಸ್: ಭಾರತದ ಓಟಗಾತಿ ದ್ಯುತಿ ಚಾಂದ್ ಗೆ ಏಳರ ಕಾಟ
ಸೋಮವಾರ, 2 ಆಗಸ್ಟ್ 2021 (10:36 IST)
ಟೋಕಿಯೋ: ಭಾರತದ ಭರವಸೆಯ ಓಟಗಾತಿ ದ್ಯುತಿ ಚಾಂದ್ ಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಏಳರ ಕಾಟ ಕಾಡಿದೆ!
ಮೊನ್ನೆಯಷ್ಟೇ ಮಹಿಳೆಯರ 100 ಮೀ. ಓಟ ಸ್ಪರ್ಧೆಯಲ್ಲಿ 7 ನೆಯವರಾಗಿ ಆಟ ಮುಗಿಸಿ ಸೆಮಿಫೈನಲ್ ಗೇರುವಲ್ಲಿ ವಿಫಲರಾಗಿದ್ದ ದ್ಯುತಿ ಈಗ ಮತ್ತೆ 200 ಮೀ. ಓಟದಲ್ಲೂ ಅದೇ ರಾಗ ಹಾಡಿದ್ದಾರೆ.
ಇಂದು ನಡೆದ 200 ಮೀ. ಓಟ ಸ್ಪರ್ಧೆಯಲ್ಲೂ ದ್ಯುತಿ ಏಳನೆಯವರಾಗಿ ಸ್ಪರ್ಧೆ ಮುಗಿಸಿ ಸೆಮಿಫೈನಲ್ ಗೇರುವಲ್ಲಿ ವಿಫಲರಾಗಿದ್ದಾರೆ. ಇಂದು ದ್ಯುತಿ ಕೊನೆಯವರಾಗಿ ಓಟ ಮುಗಿಸಿದ್ದರು. ಅಂತೂ ಎರಡೂ ವಿಭಾಗದಲ್ಲಿ ಏಳರ ಕಾಟ ಕಾಡಿದ್ದು ಸುಳ್ಳಲ್ಲ.