ಆದರೆ ಫೈನಲ್ ಸೋತ ಬಳಿಕ ತಮಗೆ ಪ್ರೋತ್ಸಾಹ ಕೊಟ್ಟ ಭಾರತೀಯ ತಾರೆ ಪಿ.ವಿ. ಸಿಂಧುವಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಸೆಮಿಫೈನಲ್ ನಲ್ಲಿ ಸಿಂಧುವನ್ನು ಮಣಿಸಿದ್ದ ತಾರೆಗೆ ಆಗಲೇ ಆರೋಗ್ಯ ಕೈಕೊಟ್ಟಿತ್ತು. ಪದೇ ಪದೇ ಕೋಚ್ ತೈಜುಗೆ ಐಸ್ ಮಸಾಜ್ ಮಾಡುತ್ತಿದ್ದರು.
ಹಾಗಿದ್ದರೂ ಫೈನಲ್ ನಲ್ಲಿ ಮೂರು ಸೆಟ್ ಗಳವರೆಗೆ ಪಂದ್ಯ ಕೊಂಡೊಯ್ದು ಎದುರಾಳಿಗೆ ಕಠಿಣ ಪೈಪೋಟಿ ಕೊಟ್ಟ ತೈಜು ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಒಳ್ಳೆಯ ಮಾತನಾಡಿದ ಭಾರತೀಯರು ಮತ್ತು ಪಿ.ವಿ. ಸಿಂಧುವಿಗೆ ಧನ್ಯವಾದ ಎಂದಿದ್ದಾರೆ. ಫೈನಲ್ ಸೋತ ಬಳಿಕ ನನ್ನನ್ನು ಅಪ್ಪಿಕೊಂಡ ಸಿಂಧು, ನಿಮಗೆ ಅನಾರೋಗ್ಯವಿದ್ದರೂ ಚೆನ್ನಾಗಿ ಆಡಿದಿರಿ. ಆದರೆ ಈವತ್ತು ನಿಮ್ಮ ದಿನವಾಗಿರಲಿಲ್ಲ. ಸಿಂಧು ನನ್ನನ್ನು ತೋಳಿನಲ್ಲಿ ಬಳಸಿ ಪ್ರೋತ್ಸಾಹಕರ ಮಾತನಾಡಿದಾಗ ನಿಜಕ್ಕೂ ಅಳುಬರುವಂತಾಯಿತು. ಸಾಕಷ್ಟು ಭಾರತೀಯರು ನನಗೆ ಪ್ರೀತಿ ತೋರಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದು ತೈಜು ಹೇಳಿಕೊಂಡಿದ್ದಾರೆ.