ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವುದರಲ್ಲಿ ಮಸ್ಕ್ ನಂ.1
ಸೋಮವಾರ, 30 ಮೇ 2022 (10:11 IST)
ವಾಷಿಂಗ್ಟನ್ : ಫಾರ್ಚೂನ್ 500ನ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ಪೈಕಿ ಟೆಸ್ಲಾ ಕಂಪನಿ ಹಾಗೂ ಸ್ಪೇಸ್ಎಕ್ಸ್ನ ಸಿಇಒ ಎಲೋನ್ ಮಸ್ಕ್ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಫಾರ್ಚೂನ್ 500 ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳ ವರದಿಯನ್ನು ಹೊರತಂದಿದೆ. ಇದರಲ್ಲಿ ಮಸ್ಕ್ ಅಗ್ರ ಸ್ಥಾನವನ್ನು ಪಡೆದಿದ್ದರೆ, ಆಪಲ್, ನೆಟ್ಫ್ಲಿಕ್ಸ್ ಕಂಪನಿಯ ಸಿಇಒ ಸೇರಿದಂತೆ ಅನೇಕರು ಅಗ್ರ 10 ಸ್ಥಾನದ ಪಟ್ಟಿಯಲ್ಲಿದ್ದಾರೆ.
2021ರಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒಗಳ ಹೆಸರು ಇಂತಿವೆ. ಇದರಲ್ಲಿ Apple, netflix, Microsoft ನ ಮುಖ್ಯಸ್ಥರು ಸೇರಿದಂತೆ ಕೆಲವು ಟೆಕ್ ಮತ್ತು ಬಯೋಟೆಕ್ನ ಸಿಇಒಗಳನ್ನು ಒಳಗೊಂಡಿವೆ.
500 ಸಿಇಒಗಳ ವೇತನ ಪ್ಯಾಕೇಜ್ಗಳನ್ನು ಮೌಲ್ಯಮಾಪನ ಮಾಡಿದ್ದು, ಇದರಲ್ಲಿ ಈ ಮೆಲಿನವರ ವೇತನವು ಸರಾಸರಿ ಒಟ್ಟು 15.9 ಮಿಲಿಯನ್ ಡಾಲರ್ ಅಧಿಕವಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೆ. 30ರಷ್ಟು ಹೆಚ್ಚಾಗಿದೆ.