ಉದ್ಯೋಗಿಗಳನ್ನು ವಜಾಗೊಳಿಸಿದ ಟ್ವಿಟ್ಟರ್ !?

ಸೋಮವಾರ, 9 ಮೇ 2022 (07:00 IST)
ವಾಷಿಂಗ್ಟನ್ : ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಇದೀಗ ತನ್ನ 1 ಸಾವಿರ ಉದ್ಯೋಗಿಳನ್ನು ವಜಾಗೊಳಿಸಲು ನಿರ್ಧರಿಸಿದ್ದಾರೆ.

ಟ್ವಿಟ್ಟರ್ನ ಮಾಲೀಕನಾಗುತ್ತಿದ್ದಂತೆ ಮಸ್ಕ್ ಕಂಪನಿಯ ಹಲವು ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆ ಇದೆ. ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಸುಮಾರು 6 ತಿಂಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಳಿಕದ 3 ವರ್ಷಗಳಲ್ಲಿ ಮಸ್ಕ್ ಹೊಸ ನೇಮಕಾತಿಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ. 

ಪ್ರಸ್ತುತ ಕಂಪನಿಯಲ್ಲಿ 7,500 ಸಿಬ್ಬಂದಿ ಇದ್ದು, ಹೊಸ ನೇಮಕಾತಿ ಮೂಲಕ ಇದರ ಸಂಖ್ಯೆಯನ್ನು 11,000ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಹೊಸ ನೇಮಕಾತಿಯಲ್ಲಿ ಹೆಚ್ಚಾಗಿ ಎಂಜಿನಿಯರ್ಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ