ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ಖಡಕ್ ವಾರ್ನಿಂಗ್!

ಗುರುವಾರ, 2 ಜೂನ್ 2022 (09:11 IST)
ವಾಷಿಂಗ್ಟನ್ : ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಇದೀಗ ಟೆಸ್ಲಾ ಸಿಇಒ ವಾರ್ನಿಂಗ್ ನೀಡಿದ್ದಾರೆ.

ಕೆಲಸ ಮಾಡಲು ಬಯಸುವವರು ಆಫೀಸ್ಗೆ ಬನ್ನಿ ಇಲ್ಲವೆಂದರೆ ಸಂಸ್ಥೆಯನ್ನೇ ಬಿಟ್ಟುಬಿಡಿ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಖಾರವಾಗಿ ಆದೇಶ ನೀಡಿದ್ದಾರೆ.

ಕೊರೊನಾ ಕಾರಣಕ್ಕೆ ಕಳೆದ ೨ ವರ್ಷಗಳಿಂದ ಹೆಚ್ಚಿನ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಮಾಡಿಕೊಟ್ಟಿತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ.

ಆದರೆ ಕೆಲವು ಕಂಪನಿಗಳ ಉದ್ಯೋಗಿಗಳು ಆರಾಮದಾಯಕವಾಗಿದ್ದ ವರ್ಕ್ ಫ್ರಂ ಹೋಮ್ ಬದಲು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ನಿಯಮ ಮಾಡುವಂತೆ ಕೇಳಿಕೊಂಡಿದ್ದಾರೆ. 

ಇದ್ಯಾವ ಮಾತಿಗೂ ಬಗ್ಗದ ಮಸ್ಕ್, ಇದೀಗ ತನ್ನ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ