ವಾಷಿಂಗ್ಟನ್ : ಚಂದ್ರಯಾನ ಹಾಗೂ ಮಂಗಳಯಾನ ಜೊತೆಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಅನ್ವೇಷಣೆಯ ಹಲವು ಕನಸುಗಳನ್ನ ಹೊಂದಿರುವ ಮಹತ್ವದ ಆರ್ಟೆಮೆಸ್ ಒಪ್ಪಂದಕ್ಕೆ ಭಾರತ ಕೂಡ ಸಹಿ ಹಾಕಿದೆ.
ಮುಂದಿನ ವರ್ಷದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೊತೆಗೂಡಿ ಕೆಲಸ ಮಾಡಲಿವೆ.
2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ ಹಾಗೂ ಇತರ ಅಂತರಿಕ್ಷ ಕುರಿತ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಿದೆ. ಈ ಮೂಲಕ ಅಮೆರಿಕ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.
ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಯುಎಸ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಈ ವೇಳೆ ಆರ್ಟೆಮೆಸ್ ಯೋಜನೆಯ ಭಾಗವಾಗಿ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.