ರಶ್ಮಿಕಾಗೆ 80 ಲಕ್ಷ ವಂಚನೆ ಎಲ್ಲಾ ಸುಳ್ಳು! ಮ್ಯಾನೇಜರ್ ಕಿತ್ತು ಹಾಕಿದ್ದಕ್ಕೆ ಬೇರೆಯದೇ ಕಾರಣ!

ಬುಧವಾರ, 21 ಜೂನ್ 2023 (08:40 IST)
Photo Courtesy: Twitter
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಅವರ ಮ್ಯಾನೇಜರ್ ನಿಂದಲೇ 80 ಲಕ್ಷ ವಂಚನೆಯಾಗಿದೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನಲಾಗುತ್ತಿದೆ.

ರಶ್ಮಿಕಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರ ಗಮನಕ್ಕೆ ಬಾರದೇ 80 ಲಕ್ಷ ರೂ. ವಂಚನೆ ಮಾಡಿದ್ದ ಎಂಬ ವರದಿಗಳು ಭಾರೀ ಸದ್ದು ಮಾಡಿತ್ತು.

ಇದೀಗ ಮೂಲಗಳ ಪ್ರಕಾರ 80 ಲಕ್ಷ ವಂಚನೆ ಮಾಡಿದ್ದಾರೆಂಬುದು ಸುಳ್ಳು. ರಶ್ಮಿಕಾ ಮ್ಯಾನೇಜರ್ ರನ್ನು ಕಿತ್ತು ಹಾಕಿದ್ದು ನಿಜ. ಆದರೆ ಅದಕ್ಕೆ ಬೇರೆಯದೇ ವೈಯಕ್ತಿಕ ಕಾರಣವಿತ್ತು ಎಂದು ಸುದ್ದಿಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ