ಮತ್ತೆ ಗಡಿ ಕಿರಿಕ್ ಶುರು ಮಾಡಿದ ನೇಪಾಳ

ಬುಧವಾರ, 10 ಜೂನ್ 2020 (10:42 IST)
ನವದೆಹಲಿ: ಚೀನಾ ಜತೆ ಮಾತುಕತೆ ಮೂಲಕ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳುತ್ತಿರುವ ಬೆನ್ನಲ್ಲೇ ಅತ್ತ ನೇಪಾಳ ಮತ್ತೆ ಗಡಿ ನಕ್ಷೆ ತಕಾರಾರು ತೆಗೆದಿದೆ.


ಚೀನಾ ಜತೆಗೇ ನೇಪಾಳವೂ ಭಾರತ ತನ್ನ ಭೂಭಾಗ ಕಬಳಿಸಿದೆ ಎಂದು ಭಾರತಕ್ಕೆ ಸೇರಿದ ಮೂರು ಗ್ರಾಮಗಳನ್ನು ಒಳಗೊಂಡ ಹೊಸ ನಕ್ಷೆ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಕೆಲವು ದಿನ ಸುಮ್ಮನಾಗಿತ್ತು.

ಇದೀಗ ಮತ್ತೆ ಗಡಿ ತಂಟೆ ಶುರು ಮಾಡಿದ್ದು, ಅಲ್ಲಿನ ಸರ್ಕಾರ ಸಂಸತ್ತಿನಲ್ಲಿ ಕಾಲಾಪಾನಿ ಮತ್ತು ಲಿಪುಲೇಖ್ ತನ್ನ ಭೂಭಾಗವೆಂದು ಬಿಂಬಿಸುವ ಹೊಸ ನಕ್ಷೆಗೆ ಕಾನೂನಾತ್ಮಕ ಮಾನ್ಯತೆ ನೀಡುವ ವಿಧೇಯಕಕ್ಕೆ ತಿದ್ದುಪಡಿ ತರಲು ಚರ್ಚೆ ನಡೆಸಿದೆ. ಈ ವಿವಾದ ಈಗ ಮತ್ತಷ್ಟು ತೀವ್ರಗೊಳ್ಳುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ