ಅತ್ತ ಮಾತುಕತೆ ಪ್ರಸ್ತಾಪವಿಟ್ಟು ಭಾರತೀಯರ ಮೇಲೆ ಗುಂಡಿನ ಮಳೆಗೆರೆದ ನೇಪಾಳ
ಈ ಘಟನೆ ನಡೆದಿರುವುದು ನೇಪಾಳದ ಗಡಿಯೊಳಗೆ. ನೇಪಾಳದತ್ತ ಸಾಗುತ್ತಿದ್ದ ಮೂವರು ಭಾರತೀಯರ ಮೇಲೆ ಗನ್ ತೋರಿಸಿ ಅಲ್ಲಿನ ಪೊಲೀಸರು ಹಿಂತಿರುಗುವಂತೆ ಸೂಚಿಸುತ್ತಾರೆ. ಅಲ್ಲದೆ, ಗುಂಡು ಹಾರಿಸಿ ಬೆದರಿಸುತ್ತಾರೆ. ಈ ವೇಳೆ ಇಬ್ಬರಿಗೆ ಗಾಯವಾದರೆ, ಇನ್ನೋರ್ವ ಗಂಭೀರ ಗಾಯದಿಂದಾಗಿ ಸಾವನ್ನಪ್ಪುತ್ತಾನೆ. ಇದೀಗ ಉಳಿದಿಬ್ಬರನ್ನು ನೇಪಾಳ ಪೊಲೀಸರು ತಮ್ಮ ವಶದಲ್ಲಿಟ್ಟುಕೊಂಡಿದ್ದು, ಇವರ ಬಿಡುಗಡೆಯಾಗಿ ಬಿಹಾರ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.