ನವದೆಹಲಿ: ಒಂದೆಡೆ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸೋಣ ಎನ್ನುತ್ತಿರುವ ಚೀನಾ ಇನ್ನೊಂದೆಡೆ ಸೇನೆ ನಿಯೋಜಿಸಿ ಭಾರತದೊಂದಿಗೆ ಡಬಲ್ ಗೇಮ್ ಆಡುತ್ತಿದೆಯೇ? ಇಂತಹದ್ದೊಂದು ಅನುಮಾನ ಶುರುವಾಗಿದೆ.
ಇದಕ್ಕೆ ಕಾರಣ ಭಾರತದೊಂದಿಗಿನ 4000 ಕಿ.ಮೀ. ವ್ಯಾಪ್ತಿಯ ಗಡಿಯಲ್ಲಿ ಚೀನಾ ಸೇನೆ ಜಮಾಯಿಸಿದೆ. ಕೇವಲ ಲಡಾಖ್ ನಲ್ಲಿ ಮಾತ್ರವಲ್ಲದೆ, ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಗಡಿ ಭಾಗಗಳಲ್ಲೂ ಸೇನೆ ಜಮಾವಣೆ ಮಾಡಿದೆ ಎನ್ನಲಾಗಿದೆ.
ಚೀನಾ ಸೇನೆ ಜಮಾಯಿಸಿರುವ ಬೆನ್ನಲ್ಲೇ ಭಾರತವೂ ತನ್ನ ಸೇನೆಯ ಬಲ ಹೆಚ್ಚಿಸಿಕೊಂಡಿದ್ದು, ಇಲ್ಲಿ ಕಟ್ಟೆಚ್ಚರ ವಹಿಸಿದೆ. ಹೀಗಾಗಿ ಒಂದೆಡೆ ಮಾತುಕತೆಯ ನಾಟಕವಾಡುತ್ತಲೇ ಇನ್ನೊಂದೆಡೆ ಸೇನೆ ನಿಯೋಜಿಸಿ ಚೀನಾ ಡಬಲ್ ಗೇಮ್ ಆಡುತ್ತಿದೆಯೇ ಎಂಬ ಗುಮಾನಿ ಎದ್ದಿದೆ.