ಟ್ರಂಪ್ ಭಾಷಣದ ಲೈವ್ ಶೋವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಸುದ್ದಿವಾಹಿನಿ. ಕಾರಣವೇನು ಗೊತ್ತಾ?

ಶನಿವಾರ, 7 ನವೆಂಬರ್ 2020 (09:40 IST)
ಅಮೇರಿಕ :ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಆರೋಪ ಮಾಡಿದ ಹಿನ್ನಲೆಯಲ್ಲಿ ರಿಪಬ್ಲಿಕ್ ಪಕ್ಷದ  ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾಷಣದ ನೇರ ಪ್ರಸಾರವನ್ನು ಅಮೇರಿಕಾದ ಸುದ್ದಿವಾಹಿನಿಗಳು ಅರ್ಧಕ್ಕೆ ಸ್ಥಗಿತಗೊಳಿಸಿವೆ ಎಂಬುದಾಗಿ ತಿಳಿದುಬಂದಿದೆ.

ಶ್ವೇತ ಭವನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇಡೀ ಅಧ್ಯಕ್ಷಿಯ ಚುನಾವಣೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮವೆಸಲಾಗುತ್ತಿದೆ. ನನಗೆ ಬಂದಿರುವ ಮತಗಳನ್ನು ಕದಿಯಲಾಗುತ್ತಿದೆ. ಇದರಲ್ಲಿ ಶ್ರೀಮಂತರು ಹಾಗೂ ಮಾಧ್ಯಮಗಳು ಸೇರಿಕೊಂಡಿವೆ ಎಂದು ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕೋಪಗೊಂಡ ಸುದ್ದಿವಾಹಿನಿಗಳು ಅವರ ಸುಳ್ಳು ಆರೋಪದ ಭಾಷಣಗಳನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲದೇ ತಮ್ಮ ಸೋಲು ಖಚಿತವೆಂದು ತಿಳಿದು ಟ್ರಂಪ್ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ